ಸಮಗ್ರ ನ್ಯೂಸ್: ಇನ್ನೇನೂ 4 ದಿನವಷ್ಟೆ ಬಾಕಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲ್ಲು. ದೇಶದೆಲ್ಲೆಡೆ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ. ಇದೇ ವಿಚಾರವಾಗಿ ಅನುಮತಿ ಪಡೆದು ರಾಮಮಂದಿರ ಉದ್ಘಾಟನೆ ಕಟೌಟ್ ಹಾಕಿದ್ದರೂ, ಆದರೆ ಇದೀಗ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲು ಮಾಡಲಾಗಿದೆ.
ಶಿವನಗರ ಯುವಕರ ಸಂಘದಿಂದ ಬೆಸ್ಕಾಂಗೆ ಹಣ ಪಾವತಿಸಿ, ಅನುಮತಿ ಪಡೆದು ಕಾರ್ಡ್ ರಸ್ತೆಯ ವಾರಿಯರ್ ಬೇಕರಿ ಬಳಿ ಬೃಹತ್ ಕಟೌಟ್ ಅಳವಡಿಸಲಾಗಿದೆ. ರಾಜಾಜಿನಗರ ಪೊಲೀಸರ ನಡೆಗೆ ಶಿವನಗರ ಯುವಕರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಒಂದು ಘಟನೆಯಾದರೆ ಕೋಲಾರದಲ್ಲಿ ಕಿಡಿಗೇಡಿಗಳು ಶ್ರೀರಾಮನ ಫ್ಲೆಕ್ಸ್ ಹರಿದು ಶಾಂತಿ ಕದಡುವ ಪ್ರಯತ್ನ ಮಾಡಿದ್ದರು. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲೂ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಸಂಕ್ರಾಂತಿ ಸಂಬಂಧ ಶುಭ ಕೋರಿ ಫ್ಲೆಕ್ಸ್ ಅಳವಡಿಸಲಾಗಿತ್ತು. ರಾತ್ರಿ 10:40 ರ ಸುಮಾರಿಗೆ ಬಂದ ದುಷ್ಕರ್ಮಿ, ಕೈಯಲ್ಲಿದ್ದ ಚಾಕುವಿನಿಂದ ಫ್ಲೆಕ್ಸ್ ಹರಿದಿದ್ದಾನೆ. ಮುಂದೆ ಹೋದವನು ಮತ್ತೆ ವಾಪಸ್ ಆಗಿ ಇನ್ನೊಮ್ಮೆ ಚಾಕು ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದ. ಇನ್ನೊಂದು ಸ್ಪಾಟ್‌ನಲ್ಲೂ ಇದೇ ರೀತಿ ಪ್ಲೆಕ್ಸ್ ಹರಿದು ಹಾಕಲಾಗಿತ್ತು. ವಿಠಲೇಶ್ವರಪಾಳ್ಯ ಮತ್ತು ಗುನುಗುಂಟೆಪಾಳ್ಯದಲ್ಲಿ ಹಾಕಲಾಗಿದ್ದ ಫ್ಲೆಕ್ಸ್ಗಳನ್ನು ಹರಿದಿದ್ದಾರೆ.
ಬೆಳಗ್ಗೆ ವಿಷ್ಯ ಗೊತ್ತಾಗುತ್ತಿದ್ದಂತೆ ಬಿಜೆಪಿ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶಗೊಂಡಿದ್ದರು. ಸ್ಥಳಕ್ಕಾಗಿಮಿಸಿದ ಸಂಸದ ಮುನಿಸ್ವಾಮಿ ಪ್ರತಿಭಟನೆ ಆರಂಭಿಸಿದ್ದರು. ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು. ಬಿಜೆಪಿ ಹೋರಾಟ ಜೋರಾಗುತ್ತಿದ್ದಂತೆ ಜಾಹೀರ್ ಹಾಗೂ ಮತ್ತೊಬ್ಬ ಆರೋಪಿಯನ್ನ ಅರೆಸ್ಟ್ ಮಾಡಲಾಗಿದೆ. ಹರಿದಿದ್ದ ಫ್ಲೆಕ್ಸ್ ತೆರವುಗೊಳಿಸಿ ಹೊಸ ಫ್ಲೆಕ್ಸ್ ಅಳವಡಿಸಲಾಗಿದೆ. ಹೊಸ ಫ್ಲೆಕ್ಸ್ ಹಾಕ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸದ್ಯ ಮುಳಬಾಗಿಲು ಪ್ರದೇಶದಲ್ಲಿ ಪೊಲೀಸರು ನಿಗಾವಹಿಸಿದ್ದಾರೆ.