Ad Widget .

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಮುಂಬರುವ ಯೋಜನೆಗಳ ಕುರಿತು ಪೂರ್ವಭಾವಿ , ಸಲಹಾ ಸಮಿತಿಯ ಸಭೆ 

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ,ಮುಂಬರುವ  ಯೋಜನೆಗಳ ಕುರಿತ ಪೂರ್ವಭಾವಿ , ಸಲಹಾ ಸಮಿತಿಯ ಸಭೆಯು ಜ. 5 ರಂದು ಪುತ್ತೂರಿನ ರೋಟರಿ ಮನಿಷಾ ಹಾಲ್ ನಲ್ಲಿ ನಡೆಯಿತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸಲಹಾ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ಸಂಸ್ಥೆಯ ಮುಂದಿನ ಮಹತ್ವಪೂರ್ಣ ಯೋಜನೆಗಳಿಗೆ ಸಲಹೆ ಸೂಚನೆಗಳ ಪದಾಧಿಕಾರಿಗಳನ್ನು ನೇಮಿಸಲಾಗಿದ್ದು ,ಮುಂದಿನ ದಿನಗಳಲ್ಲಿ,

Ad Widget . Ad Widget . Ad Widget .

1.ಸಲಹಾ ಸಮಿತಿ ಅಧ್ಯಕ್ಷರಾಗಿ ಶ್ರೀ.  ನಿತ್ಯಾನಂದ ಮುಂಡೋಡಿ. 

2.ಗೌರವ ಅಧ್ಯಕ್ಷರಾಗಿ ಶ್ರೀ . ಕಡಮಜಲು ಸುಭಾಷ್ ರೈ . 

3.ಸಂಸ್ಥೆಯ ಕಾನೂನು ಸಲಹೆಗಾರರಾಗಿ ಶ್ರೀ.  ಚಿದಾನಂದ ಬೈಲಾಡಿ . 

4.ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಸಲಹೆಗಾರರಾಗಿ ಶ್ರೀ.  ಬದನಾಜೆ ಶಂಕರ್ ಭಟ್. 

5.ಕೃಷಿ ಮಾಧ್ಯಮ ಸಲಹೆಗಾರರಾಗಿ ಶ್ರೀ.  ಕುಮಾರ್  ಪೆರ್ನಾಜೆ. 

6.ಕೃಷಿ ಅಭಿವೃದ್ಧಿ ಸಲಹೆಗಾರರಾಗಿ ಶ್ರೀ . ಪ್ರಭಾಕರ್ ಮಯ್ಯ. 

7.ಸುಸ್ಥಿರ ಕೃಷಿ ಸಲಹೆಗಾರರಾಗಿ ಶ್ರೀ . ಅಮೈ ಮಾಲಿಂಗ ನಾಯ್ಕ. 

8.ಸಾವಯವ ಕೃಷಿ ಸಲಹೆಗಾರರಾಗಿ ಶ್ರೀ . ಗಣಪಯ್ಯ ಭಟ್,  

9.ಯೋಜನೆಯ ಅಭಿವೃದ್ಧಿ ಸಲಹೆಗಾರರಾಗಿ ಶ್ರೀ.  ಐತ್ತೂರು ಪೂವಪ್ಪ ಗೌಡ, 

10.ಜಲ ಸಂರಕ್ಷಣೆ ಸಲಹೆಗಾರರಾಗಿ ಶ್ರೀ.  ಡೇವಿಡ್ ಜೈಮಿ ಕೊಕ್ಕಡ ರವರನ್ನು ಆಯ್ಕೆ ಮಾಡಲಾಯಿತು.

ಈ ಸಭೆಯಲ್ಲಿ ,ಮುಂದಿನ ಹಂತದ  “ಕಲ್ಪ ವಿಕಾಸ ” ಮಹತ್ವಾಕಾಂಶಿ  ಯೋಜನೆಯ ರೂಪು -ರೇಷೆಗಳ ಬಗ್ಗೆ ಹಾಗೂ  ತೆಂಗಿನ ಮೌಲ್ಯವರ್ಧಿತ  ಉತ್ಪನ್ನಗಳ ಕುರಿತು  ಚರ್ಚಿಸಿ ,ಸಲಹೆ ಸೂಚನೆಗಳನ್ನು ಪಡೆಯಲಾಯಿತು. ಸಾವಯವ ತೆಂಗು ಕೃಷಿಗೆ ಉತ್ತೇಜನವನ್ನು ನೀಡುವುದರ ಜೊತೆಗೆ ವೈಜ್ಞಾನಿಕ ಕೃಷಿ ಬೆಳವಣಿಗೆಗೆ ಪ್ರೋತ್ಸಾಹವನ್ನು ನೀಡಲು ಹಾಗೂ ತೆಂಗು ಸಂಸ್ಥೆಯ ಪತ್ರಿಕೆ ಬಿಡುಗಡೆ  ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ .ಕುಸುಮಾಧರ್ ಎಸ್ ಕೆ ಮಾತನಾಡಿ ಸಲಹಾ ಸಮಿತಿಯ ಸಲಹೆಗಳು ಸಂಸ್ಥೆಯ ಹಾಗೂ ರೈತರ ಬೆಳವಣಿಗೆಗೆ ಮಹತ್ವಪೂರ್ಣ ಎಂದು ತಿಳಿಸಿದರು.ಈ ಸಭೆಯಲ್ಲಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ  ಚೇತನ್ ಎ, ಸಂಸ್ಥೆಯ ಮುಖ್ಯ ಸಲಹೆಗಾರರಾಗಿರುವ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಯತೀಶ ಕೆ .ಎಸ್ ,  ಆಡಳಿತ ನಿರ್ದೇಶಕರಾಗಿರುವ ಗಿರಿಧರ್ ಸ್ಕಂದ, ಲತಾ ಕೆ ,   ವಸಂತ ಕೆ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *