ಸಮಗ್ರ ನ್ಯೂಸ್: ಜ. 21ರಂದು ಮಂಗಳೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಪದಾಧಿಕಾರಿಗಳ ಸಮಾವೇಶಕ್ಕೆ ರಾಷ್ಟ್ರಿಯ ಅಧಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸುತ್ತಿದ್ದು, ಇದರ ಕುರಿತು ಪೂರ್ವಭಾವಿ ಸಭೆಯು ಜ. 15ರಂದು ಕಡಬ ಒಕ್ಕಲಿಗ ಗೌಡರ ಸಮುದಾಯ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ವಿನಯ್ ಕುಮಾರ್ ಸೊರಕೆಯವರು ಮಾತನಾಡಿ ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಸಲಹೆ ನೀಡಿದರು. ಮಾಜಿ ಸಚಿವ ರಮಾನಾಥ ರೈಯವರು ಮಾತನಾಡಿ, ಪಕ್ಷ ಸಂಘಟನೆ ಗೆ ಒತ್ತು ನೀಡಬೇಕು ಹಾಗೂ ಗ್ಯಾರಂಟಿ ಯೋಜನೆಯನ್ನು ಪ್ರತಿ ಮನೆಗೆ ಮುಟ್ಟಿಸುವ ಕೆಲಸವನ್ನು ಮಾಡಬೇಕೆಂದು ಹೇಳಿದರು. ಕೆಪಿಸಿಸಿ ಸದಸ್ಯ ಪದ್ಮರಾಜ್ ರವರು ಪಧಾದಿಕಾರಿಗಳ ಸಮಾವೇಶದ ರೂಪುರೇಷೆಗಳನ್ನು ತಿಳಿಸಿದರು. ಬಹಳ ಸಮಯದ ನಂತರ ಕಡಬ ಬ್ಲಾಕ್ ನ ಎಲ್ಲಾ ನಾಯಕರುಗಳು ಒಗ್ಗೂಡಿ ಪಕ್ಷದಲ್ಲಿ ಯಾವುದೇ ಭಿನ್ನಭಿಪ್ರಾಯಗಳು ಇಲ್ಲಾ ಎಲ್ಲರೂ ಒಂದಾಗಿದ್ದೆವೆ ಎಂಬ ಸಂದೇಶವನ್ನು ನೀಡಿದರು.
ಮಾಜಿ ಸಚಿವರುಗಳಾದ ರಮಾನಾಥ ರೈ, ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಸದಸ್ಯ ಪದ್ಮರಾಜ್, ಡಿಸಿಸಿ ಉಸ್ತುವಾರಿ ದುರ್ಗ ಪ್ರಸಾದ್ ರೈ, ಕಡಬ ಬ್ಲಾಕ್ ಉಸ್ತುವಾರಿ ಉಮಾನಾಥ್ ಶೆಟ್ಟಿ ಆಗಮಿಸಿದ್ದರು. ಸಭೆಯಲ್ಲಿ ಕೆಪಿಸಿಸಿ ಸದಸ್ಯರುಗಳು, ಡಿಸಿಸಿ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಮುಂಚೂಣಿ ಘಟಕಗಳ ಪಧಾದಿಕಾರಿಗಳು, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು, ಯುವ ಕಾಂಗ್ರೆಸ್ ಪದಾಧಿಕಾರಿಗಳು, ಮಾಜಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯತಿ ಅಧ್ಯಕ್ಷರುಗಳು ಹಾಗು ಸದಸ್ಯರುಗಳು, ಗ್ರಾಮ ಸಮಿತಿ ಪದಾಧಿಕಾರಿಗಳು, ಹಾಗೂ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.