ಸಮಗ್ರ ನ್ಯೂಸ್: ಯಾದಗಿರಿ ತಾಲೂಕಿನ ಮೈಲಾಪುರದಲ್ಲಿ ಮೈಲಾರಲಿಂಗೇಶ್ವರ ಜಾತ್ರೆ ಪಲ್ಲಕ್ಕಿ ಮೆರವಣಿಗೆ ವೇಳೆ 2 ಗ್ರಾಮಗಳ ಜನರ ಮಧ್ಯೆ ಮಾರಾಮಾರಿ ಉಂಟಾಗಿದೆ. ಅರಕೇರ ಹಾಗೂ ರಾಮಸಮುದ್ರ ಗ್ರಾಮದ ಭಕ್ತರ ನಡುವೆ ಬಡಿದಾಟವಾಗಿದೆ.
ಹೊನ್ನಕೆರೆಗೆ ಗಂಗಾ ಸ್ನಾನಕ್ಕೆ ಮೈಲಾರಲಿಂಗೇಶ್ವರ ಪಲ್ಲಕ್ಕಿ ಹೋಗುತ್ತಿತ್ತು. ರಾಮಸಮುದ್ರ ಗ್ರಾಮದ ಕಡೆ ತೆಗೆದುಕೊಂಡು ಹೋಗಲು ಭಕ್ತರು ಯತ್ನಿಸಿದ್ದಾರೆ. ಇನ್ನೊಂದು ಕಡೆ ಪಲ್ಲಕ್ಕಿಯನ್ನು ಅರಕೇರ ಗ್ರಾಮದ ಕಡೆ ಭಕ್ತರು ಎಳೆದಾಡಿದ್ದಾರೆ. ಈ ವೇಳೆ ಎರಡು ಗ್ರಾಮಗಳ ಭಕ್ತರಿಂದ ದೊಣ್ಣೆಗಳಿಂದ ಬಡಿದಾಟವಾಗಿದೆ. ಕೊನೆಗೆ ಕೆರೆ ಕಡೆ ಮೈಲಾಪುರದ ಮೈಲಾರಲಿಂಗೇಶ್ವರನ ಪಲ್ಲಕ್ಕಿ ತೆರಳಿದೆ
ರಾಮಸಮುದ್ರ ಕಡೆ ಹೋಗಬೇಕು ಅಂತ ರಾಮಸಮುದ್ರ ಗ್ರಾಮಸ್ಥರ ವಾದವಾಗಿದ್ದರೆ, ಇನ್ನೊಂದು ಕಡೆ ಅರಕೇರ ಕಡೆ ಹೋಗಬೇಕು ಅಂತ ಅರಕೇರ ಗ್ರಾಮಸ್ಥರು ಒತ್ತಾಯವಾಗಿತ್ತು. ಇದೆ ಕಾರಣಕ್ಕೆ ಎರಡು ಗ್ರಾಮದ ಭಕ್ತರು ಕೈಯಲ್ಲಿ ದೊಣ್ಣೆಗಳನ್ನ ಹಿಡಿದುಕೊಂಡು ಹೊಡೆದಾಡಿದ್ದಾರೆ. ಎರಡು ಗ್ರಾಮದ ಭಕ್ತರನ್ನ ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಮೈಲಾರಲಿಂಗನ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ನಡೆದಿದೆ. ಪ್ರತಿ ಸಂಕ್ರಮಣ ದಿನದಂದು ನಡೆಯುವ ಜಾತ್ರೆಯಾಗಿದ್ದರಿಂದ ಲಕ್ಷಾಂತರ ಭಕ್ತರು ಬಂದು ದರ್ಶನ ಪಡೆಯುತ್ತಾರೆ.