ಸಮಗ್ರ ನ್ಯೂಸ್: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು 100 ಶತಕೋಟಿ ಡಾಲರ್ ಕ್ಲಬ್ ಕೂಡ ಸೇರುವ ಮೂಲಕ ಏಷ್ಯಾದಲ್ಲೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಗೌತಮ್ ಅದಾನಿ ಅವರು ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿದ್ದರು. ಈಗ ಈ ಸ್ಥಾನವನ್ನು ಮುಕೇಶ್ ಅಂಬಾನಿ ಮತ್ತೆ ಪಡೆದುಕೊಂಡಿದ್ದಾರೆ.
ರಿಲಯನ್ಸ್ ಕಂಪನಿಯು ಇತ್ತೀಚೆಗೆ ಹೆಚ್ಚು ಲಾಭ ಗಳಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಮುಕೇಶ್ ಅಂಬಾನಿ ಅವರು 8.7 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಜಗತ್ತಿನಲ್ಲೇ 11ನೇ ಶ್ರೀಮಂತ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ ಎಂದು ಫೆÇೀಟ್ರ್ಸ್ ರಿಯಲ್ ಟೈಮ್ ಬಿಲಿಯನೇರ್ಸ್ ಪಟ್ಟಿ ಬಿಡುಗಡೆ ಮಾಡಿದೆ.
ಫೆÇೀಟ್ರ್ಸ್ ಪಟ್ಟಿಯಲ್ಲಿ ಜಗತ್ತಿನಲ್ಲಿ 100 ಶತಕೋಟಿ ಡಾಲರ್ ಆಸ್ತಿ ಹೊಂದಿದ 12 ಉದ್ಯಮಿಗಳಿದ್ದು, ಇವರಲ್ಲಿ ಮುಕೇಶ್ ಅಂಬಾನಿಯೂ ಸ್ಥಾನ ಪಡೆದಿದ್ದಾರೆ. ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ. ಮುಕೇಶ್ ಅಂಬಾನಿ ಅವರು 2021ರಲ್ಲಿಯೇ 100 ಶತಕೋಟಿ ಡಾಲರ್ ಆಸ್ತಿ ಹೊಂದಿದ ಉದ್ಯಮಿ ಎನಿಸಿದ್ದರು. ಆದರೆ, ನಂತರದಲ್ಲಿ ಅವರ ಆಸ್ತಿಯ ಮೌಲ್ಯ ಕುಸಿದಿತ್ತು.
ಇನ್ನು 240.9 ಶತಕೋಟಿ ಡಾಲರ್ ಆಸ್ತಿ ಹೊಂದಿರುವ ಎಲಾನ್ ಮಸ್ಕ್ ಅವರು ಫೆÇೀಟ್ರ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ನಂತರದ ಸ್ಥಾನದಲ್ಲಿ ಬರ್ನಾರ್ಡ್ ಅರ್ನಾಲ್ಡ್, ಜೆಫ್ ಬೆಜೋಸ್, ಲ್ಯಾರಿ ಎಲಿಸನ್ ಹಾಗೂ ಮಾರ್ಕ್ ಜುಕರ್ ಬರ್ಗ್ ಇದ್ದಾರೆ. ಗೌತಮ್ ಅದಾನಿ ಅವರು ಜಗತ್ತಿನ 16ನೇ ಶ್ರೀಮಂತ ಎನಿಸಿದ್ದಾರೆ. ಇವರ ಆಸ್ತಿಯ ಮೌಲ್ಯ 19.4 ಶತಕೋಟಿ ಡಾಲರ್ ಇದೆ.