ಸಮಗ್ರ ನ್ಯೂಸ್: ಕೊಡಗು ಮೈಸೂರು ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿ ತನ್ನ ಪುತ್ರ ಯತ್ರಿಂದ್ರ ಗೆಲ್ಲಿಸಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ. ಆದ್ರೆ ಈ ಷಡ್ಯಂತ್ರ ಫಲಿಸುವುದಿಲ್ಲ.
ಕಾವೇರಿ ಮಾತೆ ಆಶೀರ್ವಾದ ಮತ್ತು ಕೊಡಗು ಮೈಸೂರು ಮತದಾರರ ನಂಬಿಕೆ ತನ್ನ ಮೇಲಿದೆ. ಹೀಗಾಗಿ ಅತ್ಯಧಿಕ ಮತಗಳಿಂದ ಗೆಲ್ಲುವೆ. ಇದು ಗೊತ್ತಿದ್ದೇ ತನ್ನ ವಿರುದ್ದ ಕಾಂಗ್ರೆಸ್ ಷಡ್ಯಂತ್ರ ಹೂಡಿ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಪ್ರತಾಪ್ ಆರೋಪ.
ಮರ ಕಳ್ಳತನ ಪ್ರಕರಣದಲ್ಲಿ ಅಮಾನತು ಆದ ಅರಣ್ಯ ಅಧಿಕಾರಿಗಳನ್ನು ತನಿಖೆಗೆ ಬಿಟ್ಟು ತಮ್ಮ ವಿಕ್ರಂ ಸಿಂಹ ನನ್ನು ವಿಚಾರಣೆ ಮಾಡುತ್ತಿದ್ದಾರೆ. ಎಫ್ ಐ ಆರ್ ನಲ್ಲಿ ಸಹೋದರನ ಹೆಸರು ಇಲ್ಲದಿದ್ದರೂ ಆತನನ್ನು ಬಂಧಿಸಲಾಗಿದೆ. ಇದೆಂಥ ದ್ವೇಷ ರಾಜಕಾರಣ – ಸಿಂಹ ಪ್ರಶ್ನೆ.
ಇದರಲ್ಲಿಯೇ ರಾಜ್ಯ ಸರ್ಕಾರ ತನ್ನ ಮೇಲೆ ದ್ವೇಷ ರಾಜಕೀಯ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ. ರಾಜ್ಯದ ಜನತೆ ಎಲ್ಲವನ್ನು ಕೂಡ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ.
ಪ್ರತಾಪ್ ಸಿಂಹ ಹೇಳಿಕೆ.
ಸಚಿವ ಮಧು ಬಂಗಾರಪ್ಪ ವಿರುದ್ದ 6.50 ಕೋಟಿ ಚೆಕ್ ಅಮಾನ್ಯ ಪ್ರಕರಣದಲ್ಲಿ ಶಿಕ್ಷೆ ಆಗಿದೆ. ಸಚಿವ ಮಧು ತಪ್ಪಿತಸ್ಥ ಅಂಥ ಕೋರ್ಟ್ ಹೇಳಿದೆ. ಈ ಪ್ರಕರಣದ ಪ್ರಚಾರ ತಡೆಯಲು ತನ್ನ ತಮ್ಮನ ಪ್ರಕರಣಕ್ಕೆ ಸರಕಾರ ಗಮನ ನೀಡಿದೆ ಎಂದು ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.