ವಿಜಯನಗರ: ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿರುವ ಸರ್ಕಾರಿ ಅನುಪಯುಕ್ತ ಕಟ್ಟಡಗಳು, ಅಕ್ರಮ ಚಟುವಟಿಕೆಯ ಅಡ್ಡೆಯಾಗುತ್ತಿದೆ ಹಾಗೂ ಕೆಲವೆಡೆಗಳಲ್ಲಿ ಜಾಗ ಒತ್ತುವರಿಗೆ ಸಂಚು ನಡೆದಿದೆ ಎಂದು ನಾಗರೀಕರು ದೂರಿದ್ದಾರೆ.
ಪಟ್ಟಣದ ಸಂತೆ ಮೈದಾನದಲ್ಲಿರುವ ಆಸ್ಪತ್ರೆ ಸಿಬ್ಬಂದಿಯ ಹಳೇ ನಿವೇಶನಗಳು, ಹಳೇ ಸಾರ್ವಜನಿಕ ಆಸ್ಪತ್ರೆ, ಅರ್ಧಬಂರ್ದ ಬಿದ್ದಿರುವ ಚಾವಡಿಯ ಅನುಪಯುಕ್ತ ಕಟ್ಟಡ ಸೇರಿದಂತೆ ಇನ್ನೂ ಕೆಲವು ಇಂತಹ ಕೆಲ ಸರ್ಕಾರಿ ಅನುಪಯುಕ್ತ ಕಟ್ಟಡಗಳು ಅಕ್ರಮ ಚಟುವಟಿಕೆಗಳ ತಾಣಗಳಾಗಿವೆ. ಅಕ್ರಮ ಕೋರರ ಅಡ್ಡೆಯಾಗಿದ್ದು ಕೆಲವು ಕಟ್ಟಡಗಳು ಕಸ ಸಂಗ್ರಹ ಕೇಂದ್ರಗಳಾಗಿವೆ. ಬಯಲು ಶೌಚಾಲಯಗಳಾಗಿದ್ದು ಸುತ್ತಮುತ್ತ ದುರ್ನಾಥ ಬೀರುತ್ತಿದ್ದು, ಸಹಿಸದ ಕೆಲ ಕುಟುಂಬಗಳು ಅನಿವಾರ್ಯವಾಗಿ ಜಾಗ ಖಾಲಿ ಮಾಡಿವೆ. ಈ ದುರಾವಸ್ಥೆಯಿಂದಾಗಿ ಇದರಿಂದಾಗಿ ಇಡೀ ವಾತಾವರಣ ಕಲುಷಿತವಾಗಿದ್ದು, ಹಲವಾರು ಸಾಂಕ್ರಾಮಿಕ ರೋಗಗಳನ್ನು ಉತ್ಪಾದಿಸುವ ಕಾರ್ಖಾನೆಗಳಂತಾಗಿವೆ.
ಹೀಗಿದ್ದರೂ ಪಟ್ಟಣ ಪಂಚಾಯತ್ ಅಧಿಕಾರಿಗಳು ಹಾಗೂ ತಹಶೀಲ್ದಾರರು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವೆಂದು ಹಲವಾರು ಸಂಘಟನೆಗಳು ದೂರಿವೆ, ಕೆಲ ವರ್ಷಗಳಿಂದ ಈ ಅವ್ಯವಸ್ಥೆ ಇದ್ದು ಈ ಸಂಬಂಧಿಸಿದಂತೆ ನಾಗರೀಕರು ಮತ್ತು ಕೆಲ ಸಂಘಟನೆಗಳವರು ಸಾಕಷ್ಟು ಬಾರಿ ಮನವಿ ಮಾಡಿದ್ದು, ಅಧಿಕಾರಿಗಳು ಸಂಬಂಧಿಸಿದ ಯಾವುದೇ ಕ್ರಮಗಳನ್ನು ಜರುಗಿಸಿಲ್ಲ. ಪಟ್ಟಣದಲ್ಲಿ ನೈರ್ಮಲ್ಯತೆ ಕಾಪಾಡಬೇಕಿರುವ ಪಪಂ. ಮುಖ್ಯಾಧಿಕಾರಿ ಮುಖ್ಯ ಕರ್ಥವ್ಯಗಳನ್ನೇ ಮಾಡುತ್ತಿಲ್ಲ ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಆಲಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ:
ವಂದೇ ಮಾತರಂ ಜಾಗೃತಿ ವೇದಿಕೆಯ ನಗರ ಘಟಕದ ಪದಾಧಿಕಾರಿಗಳು ಮಾತನಾಡಿದ್ದು, ಈಗ ನಡೆಯುವ ಶುಕ್ರವಾರದ ಸಂತೆ ಸ್ಥಳ ನಾಗರೀಕರಿಗೆ ಹಾಗೂ ಗ್ರಾಮೀಣ ಜನರಿಗೆ ತುಂಬಾ ದೂರವಾಗುತ್ತಿದೆ. ಕಾರಣ ಹಳೇ ವಸತಿ ನಿಲಯಗಳನ್ನ ತೆರವು ಗೊಳಿಸಬೇಕಿದ್ದು. ಈ ಹಿಂದೆ ಇದ್ದ ಜಾಗದಲ್ಲಿಯೇ ಸುಜ್ಜಿತ ಸಂತೆ ಮಾರ್ಕೇಟ್ ಮಾಡಬೇಕಿದೆ, ಹಳೇ ಸರ್ಕಾರಿ ಆಸ್ಪತ್ರೆಯ ಕಟ್ಟಡವನ್ನು ಸುಸ್ಥಿತಿಗೆ ತಂದು ಉಪ ಆರೋಗ್ಯ ಕೇಂದ್ರ ಹಾಗೂ ಹೆರಿಗೆ ಕೇಂದ್ರವನ್ನಾಗಿ ಪ್ರಾರಂಭಿಸಬೇಕಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಬಿದ್ದಿರುವ ಚಾವಡಿಯ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಬೇಕು,ಅಲ್ಲಿ ಗ್ರಂಥಾಲಯಕ್ಕೆ ನೂತನ ಕಟ್ಟಡ ನಿರ್ಮಿಸಿ ಪ್ರಾರಂಭಿಸಬೇಕಿದೆ ಎಂದು. ವಂದೇ ಮಾತರಂ ಜಾಗೃತಿ ವೇದಿಕೆ ನಗರ ಘಟಕ ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳಲ್ಲಿ ಈ ಮೂಲಕ ಮನವಿ ಮಾಡಿದ್ದಾರೆ.