ಸಮಗ್ರ ನ್ಯೂಸ್: ಕೆಎಮ್‍ಎಫ್‍ನಲ್ಲಿ ಇಲ್ಲಿಯವರೆಗೆ ಹಸುವಿನ ಹಾಲು ಮಾತ್ರ ದೊರೆಯುತ್ತಿದ್ದು ಇಂದಿನಿಂದ ಎಮ್ಮೆ ಹಾಲು ಗ್ರಾಹಕರಿಗೆ ದೊರೆಯಲಿದೆ.
ಪ್ರತೀ ಲೀಟರ್‍ಗೆ 60 ರೂಪಾಯಿ ನಿಗದಿ ಮಾಡಲಾಗಿದ್ದು, ಹಾಲು ಒಕ್ಕೂಟಗಳಿಗೆ ಪ್ರತಿನಿತ್ಯ 60 ಸಾವಿರ ಲೀಟರ್ ಎಮ್ಮೆ ಹಾಲು ಪೂರೈಕೆ ಮಾಡಲಾಗುತ್ತದೆ. ರೈತರಿಂದ ಲೀಟರ್‍ಗೆ 39.50 ರೂಪಾಯಿಗೆ ಖರೀದಿ ಮಾಡಲಾಗುತ್ತದೆ ಎಂದು ಕೆಎಂಎಫ್ ಮಾಹಿತಿ ನೀಡಿದೆ.
ಈ ಹಿಂದೆ ಕೆಎಂಎಫ್‍ನಲ್ಲಿ ಎಮ್ಮೆ ಹಾಲು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದರೂ, ಪೂರೈಕೆಯ ವ್ಯತ್ಯಯದಿಂದಾಗಿ ಪ್ರೊಡಕ್ಷನ್ ನಿಲ್ಲಿಸಲಾಗಿತ್ತು. ಬೆಂಗಳೂರು ಮಹಾರಾಷ್ಟ್ರ, ಗೋವಾ ಹಾಗೂ ಆಂಧ್ರಪ್ರದೇಶ ಮಾರುಕಟ್ಟೆಯಲ್ಲಿಯೂ ಎಮ್ಮೆ~ ಹಾಲು ಸಿಗಲಿದೆ.