ಸಮಗ್ರ ನ್ಯೂಸ್: ಮರ ಕಡಿಯುವ ವೇಳೆ ಆಯತಪ್ಪಿ ಕಟ್ಟಿಂಗ್ ಮೆಷಿನ್ ಜೊತೆ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಸಾವನಪ್ಪಿದ ಘಟನೆ ಬೆಳ್ತಂಗಡಿಯ ಸಾವ್ಯದಲ್ಲಿ ನಡೆದಿದೆ. ಮೃತರನ್ನು ಸಾವ್ಯ ಗ್ರಾಮದ ಸಾವ್ಯ ಹೊಸಮನೆ ನಿವಾಸಿ ಪ್ರಶಾಂತ್ ಪೂಜಾರಿ (46) ಎಂದು ಗುರುತಿಸಲಾಗಿದೆ.
ಈ ಘಟನೆ ಡಿಸೆಂಬರ್ 19 ರಂದು ನಡೆದಿದ್ದು, ಪ್ರಶಾಂತ್ ಕಟ್ಟಿಂಗ್ ಮೇಷಿನ್ ಜೊತೆ ಮರ ಕತ್ತರಿಸುತ್ತಿದ್ದರು, ಈ ವೇಳೆ ಆಯತಪ್ಪಿ ಅವರು ಮೆಷಿನ್ ಜೊತೆಗೆ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕಟ್ಟಿಂಗ್ ಮೆಷಿನ್ ಚಾಲನಾ ಸ್ಥಿತಿಯಲ್ಲಿದ್ದ ಕಾರಣ ಅದು ಅವರ ಕುತ್ತಿಗೆಗೆ ತಾಗಿದೆ.
ಗಂಭೀರ ಗಾಯದ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಸ್ಥಳೀಯ ಆಸ್ಪತೆಗೆ ದಾಖಲಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸಹೋದರ ಪ್ರಮೋದ್ ಈ ಬಗ್ಗೆ ವೇಣೂರು ಠಾಣೆಯಲ್ಲಿ ದೂರು ನೀಡಿದ್ದಾರೆ.