ಸಮಗ್ರ ನ್ಯೂಸ್: ಚೈನಾದ ಗನ್ಸು-ಕ್ವಿಂಗೈ ಗಡಿ ಪ್ರದೇಶದಲ್ಲಿ ಮಂಗಳವಾರ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 111 ಜನರು ಸಾವನ್ನಪ್ಪಿದ್ದಾರೆ ಮತ್ತು 230 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆ ದಾಖಲಾಗಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ಗನ್ಸು ಪ್ರಾಂತೀಯ ರಾಜಧಾನಿ ಲಾನ್ಝೌನಿಂದ ಪಶ್ಚಿಮ-ನೈಋತ್ಯಕ್ಕೆ 102 ಕಿ.ಮೀ ದೂರದಲ್ಲಿ 35 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಇಎಂಎಸ್ಸಿ ತಿಳಿಸಿದೆ. ಭೂಕಂಪದ ನಂತರದ ಘಟನೆಯಲ್ಲಿ ಯಾವುದೇ ಜನರು ಕಾಣೆಯಾಗಿದ್ದಾರೆಯೇ ಎಂದು ಅಧಿಕೃತ ವರದಿಗಳು ಲಭ್ಯವಾಗಿಲ್ಲ.
ಭೂಕಂಪದ ಕೇಂದ್ರಬಿಂದುವು ಎರಡು ವಾಯುವ್ಯ ಪ್ರಾಂತ್ಯಗಳ ನಡುವಿನ ಗಡಿಯಿಂದ 5 ಕಿ.ಮೀ ದೂರದಲ್ಲಿದೆ ಎಂದು ಅಧಿಕೃತ ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ, ಕ್ವಿಂಗೈ ಪ್ರಾಂತ್ಯದ ಅನೇಕ ಭಾಗಗಳಲ್ಲಿ ಬಲವಾದ ಭೂಕಂಪನದ ಅನುಭವವಾಗಿದೆ ಎಂದು ವರದಿ ಮಾಡಿದೆ.