ಸಮಗ್ರ ನ್ಯೂಸ್: ಶಬರಿಮಲೆಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳುವ ಮಕ್ಕಳಿಗಾಗಿ ಪ್ರತ್ಯೇಕ ದ್ವಾರವನ್ನು ತೆರೆಯುವ ಮಹತ್ವದ ನಿರ್ಧಾರವನ್ನು ತಿರುವಾಂಕೂರು ದೇವಸ್ಥಾನ ಮಂಡಳಿ ಕೈಗೊಂಡಿದೆ.
ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳುವ ಮಕ್ಕಳಿಗಾಗಿ ಟ್ರಾವೆನ್ ಕೋರ್ ದೇವಸ್ಥಾನಂ ಬೋರ್ಡ್ (ಟಿಬಿಡಿ) ವಿಶೇಷ ಗೇಟ್ ವ್ಯವಸ್ಥೆ ಕಲ್ಪಿಸಿದೆ. ಭಾನುವಾರ ಬೆಳಗ್ಗೆಯಿಂದ ಮುಂದಿನ ಸಾಲಿನಲ್ಲಿ ಮಕ್ಕಳಿಗೆ ಅಯ್ಯಪ್ಪನ ದರ್ಶನ ನೀಡಲಾಗುತ್ತಿದೆ. ಇದರಿಂದ ಮಕ್ಕಳು ಉದ್ದನೆಯ ಸರತಿ ಸಾಲಿನಿಂದ ಪಾರಾಗಿದ್ದಾರೆ. ವಿಶೇಷ ಗೇಟ್ ಮೂಲಕ ಮಕ್ಕಳನ್ನು ಕಳುಹಿಸುವ ಮೂಲಕ ಸ್ವಲ್ಪ ಟ್ರಾಫಿಕ್ ತಪ್ಪಿಸಬಹುದು ಎಂದು ನಿರ್ಧರಿಸಲಾಗಿದೆ.
ಈ ಕ್ರಮವು ಮಕ್ಕಳ ಪೋಷಕರಿಗೆ ವಿಶೇಷವಾಗಿ ಕೇರಳದ ಹೊರಗಿನ ಭಕ್ತರಿಗೆ ತುಂಬಾ ಉಪಯುಕ್ತವಾಗಿದೆ ಎಂದು ಟಿಬಿಡಿ ಬಹಿರಂಗಪಡಿಸಿದೆ. ಮತ್ತೊಂದೆಡೆ ಶಬರಿಮಲೆಯಲ್ಲಿ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಭಾಗವಾಗಿ ಶೀಘ್ರವೇ ವೈಫೈ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.