ಸಮಗ್ರ ನ್ಯೂಸ್: ದಕ್ಷಿಣ ಕನ್ನಡದ ಕಡಬ ತಾಲೂಕಿನಲ್ಲಿರುವ ಪುರಾಣ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವೈಭವದ ಚಂಪಾಷಷ್ಠಿ ಮಹೋತ್ಸವ ಇಂದಿನಿಂದ ಆರಂಭವಾಗಿದೆ.
ಮೂರು ದಿನಗಳ ಕಾಲ ಎಡೆಮಡೆ ಸ್ನಾನ ನಡೆಯಲಿದೆ ಎಂದು ಆಡಳಿತ ಸಮಿತಿ ಹೇಳಿದೆ. ಇಂದು ಶನಿವಾರ ಚೌತಿ , ಭಾನುವಾರ ಪಂಚಮಿ ಮತ್ತು ಸೋಮವಾರದ ಷಷ್ಠಿಯಂದು ಮಾತ್ರ ಎಡೆ ಮಡೆಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ದೇವರ ನೈವೇದ್ಯವನ್ನು ದೇವಸ್ಥಾನದ ಹೊರಾಂಗಣದಲ್ಲಿ ಗೋವುಗಳಿಗೆ ಬಡಿಸಲಾಗುತ್ತದೆ. ಗೋವುಗಳು ತಿಂದು ಉಳಿಸಿದ ಬಾಳೆ ಎಲೆಯಲ್ಲಿ ಭಕ್ತರು ನೆರವೇರಿಸುವ ಉರುಳು ಸೇವೆ ನಡೆಸುತ್ತಾರೆ. ಇಂದು ಒಟ್ಟು 95 ಭಕ್ತರಿಂದ ಎಡೆಮಡೆ ಸ್ನಾನದ ಸೇವೆ ನಡೆದಿದೆ. ಆನೇಕ ದಶಕಗಳಿಂದ ಇದು ಆಚರಣೆಯಲ್ಲಿದ್ದು ಮಡೆ ಸ್ನಾನ’ ಮಾಡುವ ಜನರು, ಇದು ತಮ್ಮ ಚರ್ಮದ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ನಂಬುತ್ತಾರೆ. ಕೆಲವು ಭಕ್ತರು ದೇವಸ್ಥಾನದಲ್ಲಿ ತಮ್ಮ ಇಷ್ಟಾರ್ಥಗಳಿಗೆ ಉತ್ತರ ನೀಡಿದರೆ ‘ಮಡೆ ಸ್ನಾನ’ ಮಾಡಲು ಪ್ರತಿಜ್ಞೆ ಮಾಡುತ್ತಾರೆ.