ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿ.ಡಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ರಾಜಕೀಯ ವಲಯದಲ್ಲಿ ಭಾರೀ ದೊಡ್ಡ ಸದ್ದು ಮಾಡಿತ್ತು. ಸಿಡಿ ವಿಷಯ ಹಿಡಿದುಕೊಂಡು ವಿರೋಧ ಪಕ್ಷ ಬಿಜೆಪಿಯ ವಿರುದ್ಧ ಟೀಕೆಗಳ ಸುರಿಮಳೆಗೈದಿತ್ತು.
ಅಲ್ಲದೆ, ರಾಷ್ಟ್ರಾದ್ಯಂತ ಬ್ಯೂಜೆಪಿ ಎಂಬ ಹ್ಯಾಷ್ಟ್ಯಾಗ್ ಟ್ರೆಂಡ್ ಸೃಷ್ಟಿಯಾಗಿತ್ತು. ಇದರ ಬೆನ್ನಿಗೆ ಆರೋಗ್ಯ ಸಚಿವ ಡಾ. ಸುಧಾಕರ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಶಾಸಕರು ತಮ್ಮ ಸಿಡಿ ಬಿಡುಗಡೆಯಾಗದಂತೆ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದರು. ಈ ವಿಚಾರ ಸಹ ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಗಿತ್ತು. ಇದರ ಬೆನ್ನಿಗೆ ನಿನ್ನೆ ಸಂಸದ, ಕೇಂದ್ರ ಸಚಿವ ಸದಾನಂದ ಗೌಡ ಸಹ ತಮ್ಮ ಸಿಡಿ ಬಿಡುಗಡೆಯಾಗದಂತೆ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ.
ಸದಾನಂದ ಗೌಡರ ಈ ನಡೆ ಇದೀಗ ಸಾಕಷ್ಟು ಚರ್ಚೆಗೆ ಗುರಿಯಾಗಿದೆ. ಅಲ್ಲದೆ, ಕಾಂಗ್ರೆಸ್ ಈ ಬಗ್ಗೆ ಟ್ವಿಟರ್ ಮೂಲಕ ಬಿಜೆಪಿಯ ಕಾಲೆಳೆದಿದೆ.
ಸದಾನಂದ ಗೌಡರು ತಮ್ಮ ಸಿಡಿ ಬಿಡುಗಡೆಯಾಗದಂತೆ ತಡೆ ತಂದ ಬಗ್ಗೆ ಇಂದು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, “ತಮ್ಮವರಿಂದಲೇ #BlackMailJanataParty ಎಂದು ಕರೆಸಿಕೊಂಡ ಬಿಜೆಪಿಯಲ್ಲಿ ಬ್ಲಾಕ್ಮೇಲ್ ಭರ್ಜರಿಯಾಗಿ ನಡೆಯುತ್ತಿರುವಂತಿದೆ. ಕಂಡವರ ಬೆಡ್ ರೂಮಲ್ಲಿ ಕ್ಯಾಮೆರಾ ಇಡುವ ಚಾಳಿ ಹೊಂದಿರುವ ಕರ್ನಾಟಕದ ಬಿಜೆಪಿ ನಾಯಕರು ಡಿವಿ ಸದಾನಂದ ಗೌಡ ಅವರನ್ನೂ ಬ್ಲಾಕ್ಮೇಲ್ ಮಾಡುತ್ತಿರುವಂತಿದೆ.
ಬಿಜೆಪಿಯಲ್ಲಿ ಸ್ವಚ್ಛ ಚಾರಿತ್ರ್ಯ ಹೊಂದಿದವರು ಒಬ್ಬರೂ ಇಲ್ಲ” ಎಂದು ಎಂದು ಲೇವಡಿ ಮಾಡಿದೆ.
ಸಿ.ಡಿ ಪಾರ್ಟಿ @BJP4Karnataka ಸಚಿವ @mla_sudhakar ಇತರರ ಪತ್ನಿಯರ ಲೆಕ್ಕ ಕೇಳಿದ್ದರಲ್ಲಿ ಆಶ್ಚರ್ಯವೇನನೂ ಇಲ್ಲ! ಬಿಜಿಪಿಯವರ ಒಳಹುಳುಕುಗಳ ಬಗ್ಗೆ ಎಲ್ಲರಿಗಿಂತ ಬಿಜೆಪಿಯವರಿಗೆ ಚೆನ್ನಾಗಿ ಅರಿವಿರುವಂತಿದೆ! ಗಡಿಬಿಡಿ ತಡೆಯಾಜ್ಞೆ ತಂದ @DVSadanandGowda ಅವರಿಗೆ ತಮ್ಮ ಸಿ.ಡಿ ಬಿಡುಗಡೆಯ ಕನಸು ಬಿದ್ದಿತ್ತೇ? ಎಂದು ಮತ್ತೊಂದು ಟ್ಟೀಟ್ ಮೂಲಕ ಕ್ರಾಂಗ್ರೆಸ್ನವರು ಟೀಕಿಸಿದ್ದಾರೆ.