Ad Widget .

ರಾಜ್ಯದಲ್ಲಿ ಕುಸಿತ ಕಂಡ ಕೋಳಿ‌ ದರ| ಸಂಕಷ್ಟದಲ್ಲಿ ಕುಕ್ಕುಟೋದ್ಯಮ ಮತ್ತು ಬೆಳೆಗಾರ

ಸಮಗ್ರ ನ್ಯೂಸ್: ವಿವಿಧ ಕಾರಣಗಳಿಂದ ಕೋಳಿ ಮಾಂಸಕ್ಕೆ ಬೇಡಿಕೆ ಕಡಿಮೆಯಾಗಿದ್ದು, ಒಮ್ಮೆಲೇ ಅರ್ಧಕ್ಕೆ ಕುಸಿದ ಚಿಕನ್ ದರದಿಂದ ವ್ಯಾಪಾರಿಗಳು ಕಂಗಲಾಗಿದ್ದಾರೆ. ಈ ತನಕ ಕೆಜಿಗೆ 130 ರೂ.ವರೆಗೆ ಇದ್ದ ಬ್ರಾಯ್ಲರ್ ಚಿಕನ್ ಎರಡು ದಿನಗಳ ಹಿಂದೆ 80 ರೂ.ಗೆ ಕುಸಿದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕೋಳಿ ದರ ಕುಸಿತದಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಸೀಸನ್ನಲ್ಲಿ 160 ರೂ.ವರೆಗೆ ಇದ್ದ ಕೋಳಿ ಮಾಂಸದ ದರ 80 ರೂ.ಗೆ ಇಳಿದಿದೆ. ಆದರೆ ಪ್ರಸ್ತುತ ಕೋಳಿ ಉತ್ಪಾದನಾ ವೆಚ್ಚ ಕೆಜಿಗೆ 105 ರೂ.ಗಳಾಗಿದ್ದರೆ, ಚಿಲ್ಲರೆ ದರ ಹಲವೆಡೆ 80 ರಿಂದ 90 ರೂ. ಇದೆ. ಆದರೆ ರೈತನಿಗೆ ಕೇವಲ 58ರಿಂದ 60 ರೂ. ಮಾತ್ರ ಸಿಗುತ್ತದೆ. ಮಧ್ಯವರ್ತಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಇದರ ಲಾಭ ಪಡೆಯುತ್ತಿದ್ದಾರೆ.

Ad Widget . Ad Widget . Ad Widget .

ಮಧ್ಯವರ್ತಿಗಳು ಕೆಜಿಗೆ 10ರಿಂದ 12 ರೂ., ಚಿಲ್ಲರೆ ವ್ಯಾಪಾರಿಗಳು ಕೆಜಿಗೆ 20ರಿಂದ 25 ರೂ.ವರೆಗೆ ಲಾಭ ಪಡೆಯುತ್ತಿದ್ದಾರೆ. ಆದರೆ ಕೋಳಿ ಸಾಕಣೆಗೆ ಭಾರೀ ವೆಚ್ಚ ತಗಲುತ್ತಿದೆ. 40 ದಿನಗಳ ಕಾಲ ಕೋಳಿಗೆ ಆಹಾರಕ್ಕಾಗಿ ಅದರ ಕೆಲಸಕ್ಕಾಗಿ ಅಧಿಕ ವೆಚ್ಚ ತಗಲುತ್ತಿದೆ.

ರಾಜ್ಯದಲ್ಲಿ ಕ್ರಿಸ್ಮಸ್, ಈಸ್ಟರ್, ಓಣಂ ಮತ್ತು ಮದುವೆಯ ಸೀಸನ್ಗಳಲ್ಲಿ ಒಳ್ಳೆಯ ದರದಲ್ಲಿ ಮಾರಾಟವಾಗಿದೆ. ಆದರೆ ಈ ನಡುವೆ ಶಬರಿಮಲೆ ಯಾತ್ರೆಯೂ ಆರಂಭವಾಗಿದ್ದು, ಮಾಂಸ ಮಾರಾಟ ಕುಸಿತ ಕಂಡಿದೆ. ಇದೀಗ ಹೊರ ರಾಜ್ಯಗಳಿಂದ ಕಡಿಮೆ ದರದಲ್ಲಿ ಸಿದ್ಧಪಡಿಸುವ ಬ್ರಾಯ್ಲರ್ ಕೋಳಿಗಳನ್ನು ಕೇರಳಕ್ಕೆ ತಂದು ವ್ಯಾಪಾರಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಇಲ್ಲಿಯ ಕೃಷಿಕರಿಗೆ ಕೋಳಿ ಉದ್ಯಮ ಕಬ್ಬಿಣದ ಕಡಲೆಯಾಗಿದೆ.

Leave a Comment

Your email address will not be published. Required fields are marked *