ಸಮಗ್ರ ನ್ಯೂಸ್: ಭಾರತ ಹಾಗೂ ಥೈಲ್ಯಾಂಡ್ ನಡುವೆ ಬಲವಾದ ಸಾಂಸ್ಕøತಿಕ, ಐತಿಹಾಸಿಕ ಬಾಂಧವ್ಯವಿದ್ದು, ಇದೀಗ ಭಾರತದ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಥೈಲ್ಯಾಂಡ್ ಇನ್ನಷ್ಟು ಬಲಗೊಳಿಸುತ್ತಿದೆ ಅಯೋಧ್ಯೆಯಲ್ಲಿ ನನಸಾಗುತ್ತಿರುವ ಕೋಟ್ಯಾಂತರ ಮನಸ್ಸುಗಳ ಕನಸ್ಸಾದ ಶ್ರೀರಾಮಚಂದ್ರನ ಮಂದಿರಕ್ಕೆ ಈ ಪುಟ್ಟ ರಾಷ್ಟ್ರ ಬರೋಬ್ಬರಿ ಮೂರೂವರೆ ಸಾವಿರ ಕಿಲೋ ಮೀಟರ್ ದೂರದಿಂದ ತನ್ನ ನೆಲದ ಮಣ್ಣು ಕಳುಹಿಸಿಕೊಡುತ್ತಿದೆ.
ಈ ಹಿಂದೆ ರಾಮ ಮಂದಿರಕ್ಕಾಗಿ ಥೈಲ್ಯಾಂಡ್ ತನ್ನ ಊರಿನಿಂದ ವಿಶೇಷ ನೀರನ್ನು ಕಳುಹಿಸಿಕೊಟ್ಟಿದ್ದು, ಇದೀಗ ತನ್ನ ನೆಲದ ಮಣ್ಣನ್ನು ಕಳುಹಿಸಿಕೊಡುತ್ತಿದೆ. ಇನ್ನೂ ವಿಶೇಷವೆಂದರೆ ಥೈಲ್ಯಾಂಡ್‍ನ ಪ್ರತೀ ರಾಜನ ಹೆಸರಿನಲ್ಲೂ ಪ್ರಭು ಶ್ರೀರಾಮನ ಬಿರುದು ಇದೆ ಥೈಲ್ಯಾಂಡ್‍ನ ಹಲವು ರಾಜರು ಶ್ರೀರಾಮನ ವಂಶಸ್ಥರ ಭಾಗವಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ.