ಸಮಗ್ರ ನ್ಯೂಸ್: ಕಳೆದ ಬಿಜೆಪಿ ಸರ್ಕಾರದ ಅವಧಿಗೆ ಹೋಲಿಸಿದರೆ ಈ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಕಾಂಗ್ರೆಸ್ ಸರ್ಕಾರ 2576 ಕೋಟಿ ರೂಪಾಯಿ ಹೆಚ್ಚುವರಿ ಸಾಲ ಮಾಡಿರುವ ವಿಚಾರ ಬಹಿರಂಗವಾಗಿದೆ. ರಾಜ್ಯದಲ್ಲಿನ ಉಚಿತ ಭಾಗ್ಯಗಳಿಂದ ರಾಜ್ಯದ ಸಾಲ ಹೆಚ್ಚಾಗುತ್ತಿದೆ.
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಏಳೇ ತಿಂಗಳಲ್ಲಿ ಕರ್ನಾಟಕದ ಸಾಲ 2576 ಕೋಟಿ ಹೆಚ್ಚಾಗಿದೆ. ಕಳೆದ ವರ್ಷ 4800 ಕೋಟಿ ಇದ್ದ ಸಾಲ ಈಗ 7399 ಕೋಟಿಗೆ ತಲುಪಿದೆ ಎಂದು ರಾಜ್ಯದ ಪ್ರಸಿದ್ಧ ಡಿಜಿಟಲ್ ಮಾಧ್ಯಮ ‘ಮಸ್ತ್ ಮಗಾ.ಕಾಂ’ ವರದಿ ಮಾಡಿದೆ.
ಸರ್ಕಾರ ಐದು ಗ್ಯಾರಂಟಿಗಳಿಗೆ ಹಣ ಒದಗಿಸಲು ಪ್ರತಿ ತಿಂಗಳು ಸರಾಸರಿ 350 ಕೋಟಿ ಸಾಲ ಮಾಡುತ್ತಿದೆ ಎಂಬ ಅಂಶವನ್ನು ಮಾಧ್ಯಮ ವರದಿ ಮಾಡಿದ್ದು ರಾಜ್ಯ ಸಾಲದ ಶೂಲಕ್ಕೆ ಸಿಕ್ಕಿಹಾಕಿಕೊಳ್ಳುತ್ತಿದೆ.
ಪ್ರಸ್ತುತ ಈ ಅಂಕಿ ಅಂಶಗಳನ್ನು ಆರ್ಥಿಕ ಇಲಾಖೆಯ ಅಧಿಕೃತ ಜಾಲತಾಣದಲ್ಲಿಯೂ ರಿವೀಲ್ ಮಾಡಲಾಗಿದ್ದು, ಸಾಲದ ವಿವರಗಳನ್ನು ಪರಿಶೀಲಿಸಬಹುದಾಗಿದೆ. ಒಟ್ಟಾರೆ ಉಚಿತ ಭಾಗ್ಯಗಳ ಯೋಜನೆಯಿಂದ ಸರ್ಕಾರದ ಬೊಕ್ಕಸ ಖಾಲಿಯಾಗುತ್ತಿದ್ದು, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೊಡೆತ ಬಿದ್ದಂತಾಗಿದೆ.