Ad Widget .

ಕಲಬುರಗಿಯಲ್ಲಿ ಹಾಡಹಗಲೇ ವಕೀಲನ ಬರ್ಬರ ಹತ್ಯೆ

ಕಲಬುರಗಿ ನಗರದಲ್ಲಿ ಹಾಡಹಗಲೇ ವಕೀಲನ ಬರ್ಬರ ಹತ್ಯೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯಲ್ಲಿ 6 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ನೀಲಕಂಠ ಪೊಲೀಸ್ ಪಾಟೀಲ್, ವಿಜಯಕುಮಾರ್, ಸಿದ್ದಣ್ಣಗೌಡ ಸಿದ್ರಾಮ್, ಅವ್ವಣ್ಣ, ಗುರು ಎಂಬುವವರ ವಿರುದ್ಧ ದಾಖಲಾಗಿದೆ. ಬೆಳಗ್ಗೆ ಗಂಗಾವಿಹಾರ್‌ ಅಪಾರ್ಟ್‌ಮೆಂಟ್‌ನಲ್ಲಿ ವಕೀಲನ ಕೊಲೆ ಆಗಿತ್ತು. ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಈರಣ್ಣ ಗೌಡರನ್ನು ಹತ್ಯೆಗೈದಿದ್ದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ವೃತ್ತಿಯಲ್ಲಿ ವಕೀಲರು ಆಗಿರುವ 40 ವರ್ಷದ ಈರಣ್ಣಗೌಡ ಎಂಬುವವರು ನೂರಾರು ಎಕರೆ ಜಮೀನಿನ ಜೊತೆಗೆ ರಿಯಲ್ ಎಸ್ಟೇಟ್​ ಬಿಸ್​ನೆಸ್ ಮಾಡುವುದರ ಜೊತೆಗೆ ವಕೀಲ ವೃತ್ತಿಯನ್ನು ಸಹ ಮಾಡಿಕೊಂಡು ಹೋಗುತ್ತಿದ್ದರು. ಇದರ ಮಧ್ಯೆ ಸಂಬಂಧಿಗಳ ಮಧ್ಯೆ ಜಮೀನು/ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆಯುತ್ತಾ ಇತ್ತು. ಪ್ರಕರಣ ಕೋರ್ಟ್‌ನಲ್ಲಿದ್ದರು ಸಹ, ಎರಡು ಕುಟುಂಬಸ್ಥರ ಮಧ್ಯೆ ದೊಡ್ಡಮಟ್ಟದ ವೈಷಮ್ಯ ಬೆಳೆದಿತ್ತು. ಹೀಗಾಗಿ ಇಂದು ಬೆಳಗ್ಗೆ 10.30 ಗಂಟೆಗೆ ಅಪಾರ್ಟ್ಮೆಂಟ್‌ನಿಂದ ಕೋರ್ಟ್‌ಗೆ ಈರಣ್ಣಗೌಡ ಬೈಕ್ ಮೇಲೆ ಹೊರಟಿದ್ದಾರೆ. ಈ ವೇಳೆ ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಹೊಡೆಯಲು ಮುಂದಾದಾಗ ಅವರಿಂದ ತಪ್ಪಿಸಿಕೊಂಡು ಅಪಾರ್ಟ್ಮೆಂಟ್‌ನ ಬೆಸ್‌ಮೆಂಟ್‌ಗೆ ಬಂದಾಗ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

Ad Widget . Ad Widget . Ad Widget .

ಇನ್ನು ಹತ್ಯೆಯಾದ ವಕೀಲ ಈರಣ್ಣಗೌಡ ಪೊಲೀಸ್ ಪಾಟೀಲ್ ತಂದೆ ಹಾಗೂ ಸಹೋದರರ ಮಧ್ಯೆ ಉದನೂರು ಗ್ರಾಮದಲ್ಲಿ 70 ಎಕರೆ ಜಮೀನು ವಿವಾದದಿಂದ ವೈಷಮ್ಯ ಏರ್ಪಟ್ಟಿತ್ತು. ಮೂವರು ಸಹೋದರರ ಮಧ್ಯೆ ಈರಣ್ಣಗೌಡ ಒಬ್ಬನೇ ಗಂಡು ಮಗನಾಗಿದ್ದ. ಹೀಗಾಗಿ 70 ಎಕರೆ ಆಸ್ತಿ ಎಲ್ಲಿ ಕೈತಪ್ಪಿ‌ ಹೋಗುತ್ತೋ ಎಂದು ಈರಣ್ಣಗೌಡನನ್ನ ಕೊಲೆ ಮಾಡಲು ಸ್ಕೇಚ್ ಹಾಕಿದ್ದಾರೆ. ಅದರಂತೆ ಇಂದು ಸಹೋದರ ಸಂಬಂಧಿಕರ ಮಕ್ಕಳಾದ ಕಂಟೆಪ್ಪಣ ಅವ್ವಣ್ಣ ಮತ್ತು ಭಾಗೇಶ್ ಎಂಬಾತರು ಸೇರಿಕೊಂಡು ಈರಣ್ಣಗೌಡನನ್ನ ಅಟ್ಟಿಸಿಕೊಂಡು ಭೀಕರ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಟ್ಟಿಸಿಕೊಂಡು ಹತ್ಯೆ ಮಾಡುವ ದೃಶ್ಯಗಳು ಅಪಾರ್ಟ್ಮೆಂಟ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೂ ಈ ಹಿಂದೆ ಸಹ ಈರಣ್ಣಗೌಡ ಮತ್ತು ಕುಟುಂಬಸ್ಥರ ಮೇಲೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಅಟ್ಯಾಕ್ ನಡೆದಿತ್ತು. ತನ್ನ ಜೀವಕ್ಕೆ ಅಪಾಯವಿದೆಯೆಂದು ತಿಳಿದ ಈರಣ್ಣಗೌಡ, ಮನೆ ಹಾಗೂ ತನ್ನ ಜಮೀನಿನಲ್ಲಿ ಸಹ ಸಿಸಿ ಕ್ಯಾಮರಾ ಅಳವಡಿಸಿಕೊಂಡಿದ್ದನು.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿ ಕ್ಯಾಮರಾ ವಿಡಿಯೋ ಆಧರಿಸಿ ಮತ್ತು ಸ್ಥಳದಲ್ಲಿ ಸಿಕ್ಕ ಕೆಲ ವಸ್ತುಗಳ ಜಾಡು ಹಿಡಿದು ಹಂತಕರನ್ನ ಶೀಘ್ರವೇ ಬಂಧಿಸಲಾಗುವುದು ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ತಿಳಿಸಿದ್ದಾರೆ.

Leave a Comment

Your email address will not be published. Required fields are marked *