ಸಮಗ್ರ ನ್ಯೂಸ್: ಕೋವಿಡ್ ಬಳಿಕ ಚೀನಾದಲ್ಲಿ ನ್ಯೂಮೋನಿಯಾ ರೀತಿಯ ಸೋಂಕು ತೀವ್ರಗತಿಯಲ್ಲಿ ಪಸರಿಸಿ ಆತಂಕ ಸೃಷ್ಟಿಸಿದೆ. ಮಕ್ಕಳಲ್ಲಿ ಕಾಣಿಸಿಕೊಂಡಿರುವ ಈ ಸೋಂಕಿನಿಂದ ಚೀನಾದ ಕೆಲ ಪ್ರಾಂತ್ಯದ ಆಸ್ಪತ್ರೆಗಳು ಭರ್ತಿಯಾಗಿದೆ. ಇದೇ ಸೋಂಕು ಅಮೆರಿಕದ ಮಕ್ಕಳಲ್ಲೂ ಕಾಣಿಸಿಕೊಂಡಿದೆ.
ಚೀನಾದಲ್ಲಿ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಅಲರ್ಟ್ ಘೋಷಿಸಿದ ಭಾರತ ತೀವ್ರ ಮುನ್ನಚ್ಚರಿಕೆ ವಹಿಸಿತ್ತು. ಆದರೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇದೀಗ 7 ಪ್ರಕರಣ ಪತ್ತೆಯಾಗಿದೆ. ಈ ಪ್ರಕರಣ ಚೀನಾದಲ್ಲಿ ಕಾಣಿಸಿಕೊಂಡ ನ್ಯುಮೋನಿಯಾ (pneumonia) ಬ್ಯಾಕ್ಟೀರಿಯಾ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಒಟ್ಟು 67 ಮಾದರಿಯನ್ನು ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ 7 ಮಾದರಿಯಲ್ಲಿ ಪಾಸೀಟೀವ್ ಪತ್ತೆಯಾಗಿದೆ. 2023ರ ಎಪ್ರಿಲ್‌ನಿಂದ ಸೆಪ್ಟೆಂಬರ್ ವರೆಗಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಲ್ಯಾನ್ಸೆಟ್ ಮೈಕ್ರೋಬ್ ನಡಸಿದ ಅಧ್ಯಯನದಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. 7 ಪ್ರಕರಣ ಪೈಕಿ ಒಂದು ಪ್ರಕರಣ ಪಿಸಿಆರ್ ಪರೀಕ್ಷೆ ವೇಳೆ ದೃಢಪಟ್ಟಿದೆ. ಇನ್ನುಳಿದ 6 ಪ್ರಕರಣ ಐಜಿಎಂ ಎಲಿಸಾ ಟೆಸ್ಟ್ ವೇಳೆ ಪತ್ತೆಯಾಗಿದೆ.