ಸಮಗ್ರ ನ್ಯೂಸ್: ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಹಲವು ವಿವಾದಾತ್ಮಕವಾಗಿ ಹೇಳಿಕೆಗಳಲ್ಲಿ ಮುಂದೆ ಕಾಣಿಸಿಕೊಂಡಿದ್ದು ಈಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಎಂ ಉಗ್ರರ ಜೊತೆ ನಂಟು ಹೊಂದಿರುವ ಹಾಗೂ ಐಎಸ್ಐಎಸ್ (ISIS) ಪರ ಒಲವು ಹೊಂದಿರುವ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಭಯೋತ್ಪಾದಕ ಬಗ್ಗೆ ಸಹಾನುಭೂತಿ ಹೊಂದಿರುವ, ಮಧ್ಯಪ್ರಾಚ್ಯದಾದ್ಯಂತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ತನ್ವೀರ್ ಪೀರಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ನನಗೆ ಸಿಕ್ಕಿರುವ ಮಾಹಿತಿಯಂತೆ ತನ್ವೀರ್ ಪೀರಾ ಅವರು ಈ ಹಿಂದೆ ಭಯೋತ್ಪಾದಕ ಸಹಾನುಭೂತಿ ಮತ್ತು ರಾಡಿಕಲ್ ಇಸ್ಲಾಮಿಕ್ ಆಪರೇಟಿವ್‌ಗಳನ್ನು ಭೇಟಿ ಮಾಡಿದ್ದರು.
ಇದೇ ಮೊದಲ ಬಾರಿಗೆ ಪೀರಾ ಅವರು ಸಿಎಂ ಅವರನ್ನು ಭೇಟಿ ಮಾಡಿಲ್ಲ. ಹಲವು ಸಂದರ್ಭದಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ್ದಾರೆ. ನನಗೆ ಸಿಕ್ಕಿರುವ ಮಾಹಿತಿ ಅನ್ವಯ, ಪೀರಾ ಅವರು ದೇಶದಲ್ಲಿ ಅಶಾಂತಿ ಸೃಷ್ಟಿಸುವ ದುರುದ್ದೇಶದಿಂದ ಮುಸ್ಲಿಂ ದೇಶಗಳಿಂದ ಹಣ ರೈಸ್ ಮಾಡಿ ತರುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ರಾಜಕೀಯ ಅಜೆಂಡಾಗಾಗಿ ಸಿಎಂ ಭೇಟಿ ಮಾಡಿರುವುದು ದುರದೃಷ್ಟಕರ.
ಅಲ್ಲದೇ, ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಮತ್ತು ರಾಡಿಕಲ್ ಇಸ್ಲಾಮಿಕ್ ಆಪರೇಟಿವ್‌ಗಳನ್ನು ಭೇಟಿ ಮಾಡುವ ವ್ಯಕ್ತಿ ಗಣ್ಯ ರಾಜಕೀಯ ನಾಯಕರನ್ನು ಸಾರ್ವಜನಿಕರ ಹಾಗೂ ಮಾಧ್ಯಮಗಳ ಸಮ್ಮುಖದಲ್ಲಿ ಭೇಟಿ ಮಾಡುವುದು ನಾಚಿಕೆಗೇಡು. ಆದ್ದರಿಂದ ಕೇಂದ್ರದ ತನಿಖಾ ಸಂಸ್ಥೆಗಳಿಂದ ಪೀರಾ ಅವರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು.
ಆತನ ವಿರುದ್ಧ ಕ್ರಮಕೈಗೊಳ್ಳದಿರಲು ಸ್ಥಳೀಯ ಪೊಲೀಸರು, ರಾಜ್ಯ ಸರ್ಕಾರದೊಂದಿಗೆ ಸೇರಿದ್ದಾರೆ ಎಂಬ ಶಂಕೆ ಇದೆ ಅಂತಲು ಯತ್ನಾಳ್ ಆರೋಪಿಸಿದ್ದಾರೆ. ಅಲ್ಲದೇ ಪೀರಾ ಅವರು ಐಎಸ್ಐಎಸ್ ಉಗ್ರರನ್ನು ಭೇಟಿ ಮಾಡುತ್ತಿದ್ದರು, ಅವರ ಟ್ರಾವೆಲ್ ಖರ್ಚು ವೆಚ್ಚ ಹಾಗೂ ಭೇಟಿಯ ಉದ್ದೇಶದ ಬಗ್ಗೆ ಎನ್ಐಎ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದ್ದಾರೆ.