ಸಮಗ್ರ ನ್ಯೂಸ್: ಕಳೆದ ಹನ್ನೆರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿವೆ. ನರೇಂದ್ರ ಮೋದಿ, ಸಿದ್ದರಾಮಯ್ಯ, ರಾಷ್ಟ್ರಪತಿಗಳು ಮಾತನಾಡುತ್ತಿಲ್ಲ. ನಿಮಗೆ ಸೌಜನ್ಯಳಿಗೆ ನ್ಯಾಯ ಕೊಡಿಸಲಾಗದಿದ್ದರೆ ಹೋರಾಟಗಾರರಿಗೆ ದಯಾಮರಣ ಕರುಣಿಸಿ’ ಎಂದು ಮಹೇಶ್ ಶೆಟ್ಟಿ ತಿಮರೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಜಿರೆಯಲ್ಲಿ ನಡೆದ ಸೌಜನ್ಯ ಪರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ತಿಮರೋಡಿ, ಹೋರಾಟದ ಹಾದಿ ತಪ್ಪಿಸಿದ ಅಧಿಕಾರಿಗಳ ವಿರುದ್ದ, ಹಾಗೂ ಉದ್ದೇಶ ಪೂರಕವಾಗಿ ಮಾತನಾಡುತ್ತಿರುವ ರಾಜ್ಯದ ಮಾಧ್ಯಮವೊಂದರ ಮುಖ್ಯಸ್ಥರ ವಿರುದ್ದ ಹರಿಹಾಯ್ದರು.
‘ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯ ಕೇಳುವುದೇ ತಪ್ಪು. ಭಾರತದಂತ ರಾಷ್ಟ್ರದಲ್ಲಿ ಹುಟ್ಟಿದ ನಮಗೆ ಈ ರೀತಿಯ ದುರ್ಗತಿ ಬರಬಾರದು. ಇದು ನಮ್ಮ ವ್ಯವಸ್ಥೆಗೆ ಶೋಭೆಯಲ್ಲ’ ಎಂದರು.
ಪ್ರತಿಭಟನಾ ಸಭೆಯಲ್ಲಿ ಹೋರಾಟಗಾರರಾದ ತಮ್ಮಣ್ಣ ಶೆಟ್ಟಿ, ಪ್ರಸನ್ನ ರವಿ, ಗಿರೀಶ್ ಮಟ್ಟಣ್ಣನವರ್, ಕುಸುಮಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.