ಸಮಗ್ರ ನ್ಯೂಸ್: ಕೊರೊನದಿಂದ ಜನ ಬೇಸತ್ತು ಇನ್ನೂ ಹೊರಬಂದಿಲ್ಲ, ಅದ್ರೆ ಇದೀಗ ಚೀನಾದ ಹೊಸ ಸೊಂಕಿನ ಆತಂಕ ಶುರುವಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದೀಗ ಮತ್ತೆ ಮಾಸ್ಕ್ ಧರಿಸಲು ಆದೇಶಿಸಿದೆ.
ಕೆಮ್ಮುವಾಗ ಸಮವಸ್ತ್ರದಿಂದ ಬಾಯಿ ಮೂಗು ಮುಚ್ಚಿಕೊಳ್ಳುವುದು. ಕೈಯನ್ನು ಆಗಾಗಾ ಸ್ವಚ್ಛವಾಗಿ ತೊಳೆಯುವುದು, ಅನಗತ್ಯವಾಗಿ ಕಣ್ಣು, ಮೂಗು ಮುಟ್ಟಬೇಡಿ ಎಂದು ಆದೇಶಿಸಿದೆ.
ಜನಸಂದಣಿ ಜಾಗದಲ್ಲಿ ಮಾಸ್ಕ್ ಬಳಸಬೇಕು, ನೀರು ಚೆನ್ನಾಗಿ ಕುಡಿಯಬೇಕು, ಪೌಷ್ಟಿಕ ಆಹಾರ ಸೇವಿಸುವಂತೆ ಹೇಳಿದ್ದಾರೆ. ರೋಗದ ಲಕ್ಷಣ ಕಂಡು ಬಂದಲ್ಲಿ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಆದೇಶಿಸಿದೆ.