ಸಮಗ್ರ ನ್ಯೂಸ್: ನ. 27ರಂದು ಶಿಕ್ಷಣ ಫೌಂಡೇಶನ್, ಡೆಲ್ ಸಂಸ್ಥೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ನಡೆಯುತ್ತಿರುವ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ಸುಳ್ಯ ತಾಲೂಕಿನಲ್ಲಿ ಆಯ್ಕೆಯಾದ 8 ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಡಿಜಿಟಲ್ ಸಾಧನಗಳಾದ ಮೊಬೈಲ್ ಮತ್ತು ಸ್ಪೀಕರ್ ಗಳನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಹಾಗೂ ಸುಳ್ಯ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಅವರ ಮುಖೇನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಫೌಂಡೇಶನ್ ನ ಗ್ರಾಮ ಡಿಜಿ ವಿಕಸನದ ಜಿಲ್ಲಾ ಸಂಯೋಜಕ ಲವಿಶ್ ಕುಮಾರ್ ಪಿ. ಹಾಗೂ ತಾಲೂಕು ಸಂಯೋಜಕ ದಿನೇಶ್ ಡಿ.ಎಸ್. ಉಪಸ್ಥಿತರಿದ್ದು, ಗ್ರಾಮ ಡಿಜಿ ವಿಕಸನದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಂಥಾಲಯ ಮೇಲ್ವಿಚಾರಕರು, ತಾ.ಪಂ. ಸಿಬ್ಬಂಧಿಗಳು ಉಪಸ್ತಿತರಿದ್ದರು.