Ad Widget .

ಕಾರ್ಕಳ: ಹೆಚ್ಚಿದ ಚಿರತೆ ಹಾವಳಿ| ಭಯಭಿತರಾದ ಜನತೆ

ಸಮಗ್ರ ನ್ಯೂಸ್: ಕಾರ್ಕಳ ತಾಲೂಕಿನ ಕೌಡೂರು ಗ್ರಾಮದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಕಳೆದೆರಡು ದಿನಗಳಲ್ಲಿ ನಾಲ್ವರ ಮೇಲೆ ಚಿರತೆ ದಾಳಿ ನಡೆಸಿದ್ದು, ಚಿರತೆಯನ್ನು ಕೂಡಲೇ ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ನ. 23 ರ ಬೆಳಗ್ಗೆ ನಾಗಂಟೆಲ್‌ನಲ್ಲಿ ಸಾಕು ನಾಯಿಯ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದು, ಅದರ ರಕ್ಷಣೆ ಮಾಡಲು ತೆರಳಿದ್ದ ಸುಧೀರ್‌ ನಾಯ್ಕ ಅವರ ಮುಖ, ಕೈಗೆ ಚಿರತೆ ಗಾಯಗಳನ್ನು ಮಾಡಿತ್ತು. ಮಧ್ಯಾಹ್ನ ಅದೇ ಪ್ರದೇಶದಲ್ಲಿ ದ್ವಿಚಕ್ರ ವಾಹನವೊಂದರಲ್ಲಿ ತೆರಳುತ್ತಿದ್ದ ನಿಧೀಶ್‌ ಆಚಾರ್ಯ ಎಂಬುವವರ ಮೇಲೆ ಚಿರತೆ ದಾಳಿ ಮಾಡಲು ಯತ್ನಿಸಿತ್ತು. ಸ್ವಲ್ಪ ಸಮಯದ ಬಳಿಕ ಅದೇ ದಾರಿಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಸದಾನಂದ ಪುತ್ರನ್‌ ಎಂಬುವವರ ತಲೆಗೆ ದಾಳಿ ನಡೆಸಿತ್ತು. ಆದರೆ ಸದಾನಂದ ಅವರು ಹೆಲ್ಮೆಟ್ ಧರಿಸಿಕೊಂಡಿದ್ದರಿಂದ ದೊಡ್ಡ ಅಪಾಯವೊಂದರಿಂದ ಪಾರಾಗಿದ್ದಾರೆ. ಬಳಿಕ ನ. 24 ರಂದು ಅದೇ ಪರಿಸರದಲ್ಲಿ ದನಗಳನ್ನು ಮೇಯಿಸಲು ಗದ್ದೆಗೆ ತೆರಳಿದ್ದ ಜಯಂತಿ ನಾಯ್ಕ ಮತ್ತು ಮಲ್ಲಿಕಾ ನಾಯ್ಕ ಅವರ ಮೇಲೆ ದಾಳಿ ನಡೆಸಿದ್ದು, ಅವರ ಕೈಗಳಿಗೆ ತೀವ್ರ ತರದ ಪರಚಿದ ಗಾಯಗಳನ್ನು ಮಾಡಿದೆ.

Ad Widget . Ad Widget . Ad Widget .

ಇನ್ನು ಕಳೆದೆರಡು ದಿನಗಳಿಂದ ನಡೆಯುತ್ತಿರುವ ಚಿರತೆಯ ದಾಳಿಗೆ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಘಟನೆಯ ಬಳಿಕ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಬೋನು ಇರಿಸಿ ಚಿರತೆಯನ್ನು ಸೆರೆ ಹಿಡಿಯಲು ಯತ್ನಿಸುತ್ತಿದ್ದಾರೆ. ಈ ಪರಿಸರದಲ್ಲಿ ಹಲವು ಸಮಯದಿಂದ ಚಿರತೆ ಹಾವಳಿ ಇದ್ದು, ಕೆಲ ಸಾಕುಪ್ರಾಣಿಗಳನ್ನು ಕೊಂದುಹಾಕಿತ್ತು. ಆದರೆ, ಇದೀಗ ಮನುಷ್ಯರ ಮೇಲೂ ಚಿರತೆ ದಾಳಿಗೆ ಮುಂದಾಗಿರುವುದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಈ ವಿಚಾರವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *