ಸಮಗ್ರ ನ್ಯೂಸ್: ಒಂದೇ ಬಾರಿ ಹೆರಿಗೆಯಲ್ಲಿ ಅವಳಿ ಮಕ್ಕಳ ಜನನವನ್ನು ನಾವು ಅನೇಕ ಸಂದರ್ಭಗಳಲ್ಲಿ ನೋಡುತ್ತೇವೆ. ಇದು ಸಾಮಾನ್ಯ ವಿಷಯವೆಂದೇ ಹೇಳಬಹುದು. ಆದರೆ ಒಂದೇ ಬಾರಿಗೆ ನಾಲ್ಕು ಮಕ್ಕಳು ಹುಟ್ಟುವುದು ತೀರಾ ಅಪರೂಪ; ಅಸಾಧಾರಣವೂ ಕೂಡ. ಆದರೆ, ಇಲ್ಲಿ ಗರ್ಭಿಣಿಯೊಬ್ಬರು ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಜಿಲ್ಲೆಯ ನೈನಿಜೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಚೋಟ್ಕಿ ನೈನಿಜೋರ್ ಗ್ರಾಮದ ಭರತ್ ಯಾದವ್ ಅವರ ಪತ್ನಿ ಜ್ಞಾನತಿ ದೇವಿ (32) ಏಕಕಾಲದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಡೀ ಕುಟುಂಬವು ಅತ್ಯಂತ ಸಂತೋಷದಿಂದ ಕೂಡಿದೆ ಮತ್ತು ನವಜಾತ ಶಿಶುಗಳ ಆರೈಕೆಗಾಗಿ ಒಟ್ಟಿಗೆ ಸೇರಿದ್ದಾರೆ.
ಜ್ಞಾನಿ ದೇವಿಗೆ ಶಸ್ತ್ರಚಿಕಿತ್ಸೆ ನಡೆಸಿದ ಸ್ತ್ರೀರೋಗ ತಜ್ಞ ಡಾ|ಗುಂಜನ್ ಸಿಂಗ್ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಮೊದಮೊದಲು ಜ್ಞಾನತಿದೇವಿಯ ಹೊಟ್ಟೆಯಲ್ಲಿ ನಾಲ್ವರು ಮಕ್ಕಳಿರುವುದು ತನಗೆ ಗೊತ್ತಿರಲಿಲ್ಲ. ನಂತರ ಮಹಿಳೆ ಹೊಟ್ಟೆಯಲ್ಲಿ ಒಂದಲ್ಲ ನಾಲ್ಕು ಮಕ್ಕಳನ್ನು ಹೊತ್ತಿರುವುದು ಪತ್ತೆಯಾಗಿದೆ. ಮೇಲಾಗಿ ನಾಲ್ವರು ಹುಡುಗರಿರುವುದು ಗೊತ್ತಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ನಾಲ್ಕು ಶಿಶುಗಳು ಮತ್ತು ತಾಯಿ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ಡಾ.ಗುಂಜನ್ ಸಿಂಗ್ ಸಂತಸ ವ್ಯಕ್ತಪಡಿಸಿದರು.
ಈ ಆಸ್ಪತ್ರೆಯಲ್ಲಿ ಒಂದೇ ಬಾರಿಗೆ ನಾಲ್ಕು ಶಿಶುಗಳು ಜನಿಸಿರುವುದು ಇದೇ ಮೊದಲು ಎಂದು ತಿಳಿದುಬಂದಿದೆ. ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳು ಜನಿಸಿರುವ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಭರತ್ ಯಾದವ್, ಜ್ಞಾನತಿದೇವಿ ಕುಟುಂಬದಲ್ಲಿ ಐವರು ಗಂಡು ಮಕ್ಕಳಿದ್ದು, ಒಂದೇ ವಯಸ್ಸಿನ ನಾಲ್ಕು ಮಕ್ಕಳಿದ್ದಾರೆ. ತಾಯಿ ಮತ್ತು ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಭರತ್ ಯಾದವ್ ಹೇಳಿದ್ದಾರೆ. ಒಂದೇ ಸಮಯದಲ್ಲಿ ನಾಲ್ಕು ಮಕ್ಕಳನ್ನು ನೋಡಿಕೊಳ್ಳುವುದು ತುಂಬಾ ಕಷ್ಟ. ಒಂದೇ ಸಮಯದಲ್ಲಿ ನಾಲ್ಕು ಮಕ್ಕಳು ಅಳುತ್ತಿದ್ದರೆ ಅವರಿಗೆ ಹಾಲುಣಿಸುವುದು ತುಂಬಾ ಕಷ್ಟ. ಆದರೆ, ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತಿದೆ. ಎಷ್ಟೇ ಕಷ್ಟ ಬಂದರೂ ಹೆಂಡತಿ ಮಕ್ಕಳನ್ನು ನೆಮ್ಮದಿಯಿಂದ ಸಾಕುತ್ತೇವೆ ಎಂದು ಹೇಳಿದರು.