Ad Widget .

ಹಿಂದು ರಾಷ್ಟ್ರದ ಮರುಸ್ಥಾಪನೆ/ ನೇಪಾಳದಲ್ಲಿ ಬೃಹತ್ ಪ್ರತಿಭಟನೆ

ಸಮಗ್ರ ನ್ಯೂಸ್: ನೇಪಾಳದಲ್ಲಿ ರಾಜಪ್ರಭುತ್ವವನ್ನು ಮರುಸ್ಥಾಪಿಸಬೇಕು ಹಾಗೂ ದೇಶಕ್ಕಿದ್ದ ‘ಹಿಂದು ರಾಷ್ಟ್ರ’ ವೆಂಬ ಸ್ಥಾನಮಾನವನ್ನು ಪುನಃ ನೀಡಬೇಕು ಎಂದು ಆಗ್ರಹಿಸಿ ಸಹಸ್ರಾರು ನಾಗರಿಕರು ನೇಪಾಳದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪ್ರಸ್ತುತ ಅಸ್ಥಿತ್ವದಲ್ಲಿರುವ ಪ್ರಜಾಪ್ರಭುತ್ವ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿ ಆಡಳಿತವನ್ನು ಸಂಪೂರ್ಣ ಕಡೆಗಣಿಸಿವೆ ಎಂದು ಪ್ರತಿಭಟನೆ ನಡೆದಿದ್ದು, “ನಾವು ನಮ್ಮ ರಾಜ ಮತ್ತು ದೇಶವನ್ನು ನಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇವೆ. ರಾಜಪ್ರಭುತ್ವವನ್ನು ಮರಳಿ ತನ್ನಿ. ಗಣರಾಜ್ಯವನ್ನು ರದ್ದುಪಡಿಸಿ” ಎಂಬ ಘೋಷಣೆಗಳು ಮಾರ್ದನಿಸಿವೆ. ನೇಪಾಳದ ಮಾಜಿ ದೊರೆ ಜ್ಞಾನೇಂದ್ರನ ಪರ ಘೋಷಣೆಗಳನ್ನು ಕೂಗುತ್ತ ಕಾಠ್ಮಂಡು ನಗರವನ್ನು ಆವರಿಸುತ್ತಿರುವ ಪ್ರತಿಭಟನಾಕಾರರರನ್ನು ನಿಯಂತ್ರಿಸುವುದಕ್ಕೆ ಪೆÇಲೀಸರು ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ ಮಾಡಿದ್ದಾರೆ.

Ad Widget . Ad Widget . Ad Widget .

ಪ್ರತಿಭಟನೆಗಳ ಹಿನ್ನಲೆಯಲ್ಲಿ 2006ರಲ್ಲಿ ಅಂದಿನ ರಾಜ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. 2008ರಲ್ಲಿ ನೇಪಾಳವು ಪ್ರಜಾಪ್ರಭುತ್ವದ ಗಣರಾಜ್ಯ ವ್ಯವಸ್ಥೆ ಚಾಲ್ತಿಗೆ ಬಂದಿದ್ದು. ಈ ಬೆಳವಣಿಗೆಗಳಿಗೆ ಕಮ್ಯುನಿಸ್ಟರ ಕುಮ್ಮಕ್ಕಿತ್ತೆಂಬ ಆರೋಪಗಳು ಆಗ ದಟ್ಟವಾಗಿ ಕೇಳಿಬಂದಿದ್ದವು. ತದನಂತರ ಹಲವು ಪಕ್ಷಗಳು ನೇಪಾಳದ ಆಡಳಿತ ಚುಕ್ಕಾಣಿಯನ್ನು ನಿರ್ವಹಿಸಿದ ನಂತರ, ಈಗ ಅಲ್ಲಿನ ಬಹುದೊಡ್ಡ ಜನವರ್ಗವು ರಾಜಸತ್ತೆಯೇ ಉತ್ತಮವಾಗಿತ್ತು ಎಂಬ ಭಾವನೆಗೆ ಮರಳಿದೆ.

ರಾಜಸತ್ತೆಗಾಗಿ ಬೀದಿಗಿಳಿದಿರುವವರು ನೇಪಾಳವನ್ನು ಮತ್ತೆ ಹಿಂದುರಾಷ್ಟ್ರ ಎಂದು ಘೋಷಿಸಬೇಕೆಂದೂ ಪಟ್ಟು ಹಿಡಿದಿದ್ದಾರೆ. 2007ರಲ್ಲಿ ನೇಪಾಳದಲ್ಲಿ ಅಂಗೀಕರಿಸಲಾಗಿದ್ದ ಮಧ್ಯಾಂತರ ಸಂವಿಧಾನವು ನೇಪಾಳವನ್ನು ಸೆಕ್ಯುಲರ್ ಎಂದು ವ್ಯಾಖ್ಯಾನಿಸಿತ್ತು.

Leave a Comment

Your email address will not be published. Required fields are marked *