Ad Widget .

ಬೆಳ್ತಂಗಡಿ: ತಡರಾತ್ರಿ ಮನೆ ಬಾಗಿಲು ತಟ್ಟಿದ್ರಾ ನಕ್ಸಲರು? ಅಸಲಿ ಕಥೆ ಇಲ್ಲಿದೆ ನೋಡಿ…

ಸಮಗ್ರ ನ್ಯೂಸ್: ನಕ್ಸಲ್​ ಪೀಡಿತ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಅರಣ್ಯ ವ್ಯಾಪ್ತಿಯ ಕುತ್ಲೂರು ಗ್ರಾಮದ ಒಂಟಿ ಮನೆಯೊಂದರ ಬಾಗಿಲನ್ನು ನಿನ್ನೆ (ನ.21) ರಾತ್ರಿ ಐದು ಜನ ಅಪರಿಚಿತರ ತಂಡ ತಟ್ಟಿದ ಘಟನೆ ನಡೆದಿದೆ. ಇದು ಬಹಳ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸ್ಪಷ್ಟನೆ ನೀಡಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

‘ಜಮೀನು ರಿಜಿಸ್ಟರ್ ವಿಚಾರದಲ್ಲಿ ಹಣದ ವ್ಯತ್ಯಾಸದಿಂದ ದೂರು ಹಿನ್ನಲೆ ಆರೋಪಿ ಬೆಳಗ್ಗೆ ಸಿಗಲ್ಲವೆಂದು ರಾತ್ರಿಯೇ ಮೂಡಬಿದ್ರೆ ಪೊಲೀಸರು ಹಣ ವಂಚನೆ ವಿಚಾರದಲ್ಲಿ ಇಬ್ಬರು ಹೆಡ್ ಕಾನ್ಸ್‌ಟೇಬಲ್, ಓರ್ವ ಮಹಿಳಾ ಪೊಲೀಸ್, ಓರ್ವ ದೂರುದಾರರು ಹೋಗಿದ್ದಾರೆ. ಬಳಿಕ ಪೊಲೀಸರು ಎಂದು ಆತನಿಗೆ ನಿನ್ನೆ ರಾತ್ರಿಯೇ ಅರಿವು ಮಾಡಲಾಗಿದೆ. ಆದರೂ ನಕ್ಸಲ್ ಎಂದು ಮನೆ ಮಾಲೀಕ ಜೋಸ್ಸಿ ಆಂಟನಿ ನಾಟಕವಾಡಿದ್ದಾನೆ ಎಂದರು.

Ad Widget . Ad Widget . Ad Widget .

ಅದರಲ್ಲಿ ನಾಲ್ವರು ಪುರುಷರು ನೀಲಿ ಬಣ್ಣದ ಬಟ್ಟೆ ಧರಿಸಿದ್ದರೆ, ಓರ್ವ ಮಹಿಳೆ ಖಾಕಿ ಬಟ್ಟೆ ಧರಿಸಿ, ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಬಂದಿದ್ದರಂತೆ. ಜೊತೆಗೆ ಮನೆಯ ಬಾಗಿಲನ್ನು ತೆಗೆಯದೇ ಇದ್ದಾಗ, ಹಾರೆಯಲ್ಲಿ ಮೀಟಿ ಬಾಗಿಲನ್ನು ತೆಗೆಯಲು ಪ್ರಯತ್ನಿಸಿದ್ದಾಗಿ ಮನೆ ನಿವಾಸಿ ಜೋಸಿ ಆಂಟನಿ ಹೇಳಿದ್ದರು.

ಇನ್ನು ರಾತ್ರಿ ಆಗಮಿಸಿದ್ದ ಅಪರಿಚಿತರು ಬಾಗಿಲು ತೆಗೆಯಲು ಪ್ರಯತ್ನಿಸುತ್ತಿದ್ದಂತೆ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ವೇಣೂರು ಮತ್ತು ಬೆಳ್ತಂಗಡಿ ಪೊಲೀಸರು ದೌಡಾಯಿಸಿದ್ದಾರೆ. ಈ ಅಪರಿಚಿತ ತಂಡ, ವೇಣೂರು ಪೊಲೀಸರು ಎಂದು ಹೇಳಿ ಪರಿಚಯ ಮಾಡಿಕೊಂಡು ಬಾಗಿಲು ತೆಗೆಯಿರಿ ಎಂದು ಹೇಳಿದ್ದರಂತೆ. ಬಂದಿದ್ದವರು ನಕ್ಸಲರು ಎಂಬ ಶಂಕೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

Leave a Comment

Your email address will not be published. Required fields are marked *