ಸಮಗ್ರ ನ್ಯೂಸ್: ಹಳೆಯ ಮನೆಯನ್ನು ದುರಸ್ತಿ ಮಾಡಲು ಕಾಮಗಾರಿ ಮಾಡುವ ಸಂದರ್ಭದಲ್ಲಿ ತಮ್ಮನೆ ಅಣ್ಣನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ಹೊರವಲಯದ ಕಾಕೋಟು ಪರಂಬುವಿನಲ್ಲಿ ನಡೆದಿದೆ.
ದಯಾನಂದ ಕೆ.ಜಿ.(67) ಹುಟ್ಟು ಅಂಗವಿಕಲರಾಗಿದ್ದು ಅವರಿಗೆ ಸೇರಿದ ಮೂವತ್ತೈದು ವರ್ಷಗಳು ಹಿಂದಿನ ಮನೆಯು ಮಳೆಗಾಲದಲ್ಲಿ ಸಂಪೂರ್ಣವಾಗಿ ಸೋರುತ್ತಿದ್ದ ಕಾರಣ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಮನೆ ರಿಪೇರಿ ಕೆಲಸ ಮಾಡಲು ದಯಾನಂದ ಕುಟುಂಬದ ಸದಸ್ಯರು ನಿರ್ಧಾರ ಮಾಡಿದರು. ಅದರಂತೆ ರಿಪೇರಿ ಕೆಲಸ ಮಾಡುವ ಸಮಯದಲ್ಲಿ ದಯಾನಂದ ಅವರ ಸಹೋದರ ಸತೀಶ್ ಹಾಗೂ ಅವರ ಪತ್ನಿ ಕಮಾಲಾಕ್ಷಿ ಅವರು ದಯಾನಂದ ಅವರ ಜೊತೆಗೆ ಜಗಳ ತೆಗೆದು ದೊಣ್ಣೆಯಿಂದ ಹಿಗ್ಗ ಮುಗ್ಗ ಥಳಿಸಿದ್ದಾರೆ.
ಇದರಿಂದ ಅಂಗವಿಕಲರಾದ ದಯಾನಂದ ಅವರು ಕಾಲಿನ ಮೂಳೆ ಮುರಿದು ಹೋಗಿದ್ದು, ಕೈಗಳು ಸಂಪೂರ್ಣ ಘಾಸಿ ಗೊಂಡಿದೆ, ಜಗಳ ಬಿಡಿಸಲು ತೆರಳಿದ ದಯಾನಂದ ಅವರ ಪತ್ನಿ ಲಲಿತ (60) ಅವರ ಮೇಲೆ ಕೂಡ ಹಲ್ಲೆ ನಡೆದು ಮುಖ ಭಾಗಕ್ಕೆ ಗಂಭೀರವಾಗಿ ಗಾಯವಾಗಿದೆ.
ವಿರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಸತೀಶ್ ಮತ್ತು ಆತನ ಪತ್ನಿ ಕಮಾಲಕ್ಷಿ ವಿರುದ್ಧ ಗ್ರಾಮಾಂತರ ಪೊಲೀಸರು 143/2023ರ ಕಲಾಂ ಅಡಿಯಲ್ಲಿ, 341, 323, 504, 506, R/W 34, ಐಪಿಸಿಯಂತೆ ಪ್ರಕರಣ ದಾಖಲಿಸಿದ್ದಾರೆ.