ಸಮಗ್ರ ನ್ಯೂಸ್: ಉತ್ತರ ಪ್ರದೇಶದ ನಡೆದ ಮದುವೆ ಕಾರ್ಯಕ್ರಮದಲ್ಲಿ ರಸಗುಲ್ಲಾ ಕಡಿಮೆಯಾಯಿತೆಂದು ಬಡಿದಾಡಿಕೊಂಡ ಘಟನೆ ನಡೆದಿದೆ. ಇದರಿಂದಾಗಿ ಮಹಿಳೆಯರು ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಶಂಸಾಬಾದ್‍ನ ಬ್ರಿಜ್ಛಾನ್ ಕುಶ್ವಾಹಾ ಅವರ ನಿವಾಸದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದು, ಮದುವೆಗೆ ರಸಗುಲ್ಲಾ ಮಾಡಿಸಲಾಗಿತ್ತು. ಆದರೆ ರಸಗುಲ್ಲಾ ಶಾರ್ಟೆಜ್ ಆಗಿತ್ತು. ಈ ಕುರಿತು ಸಂಬಂಧಿಕರೊಬ್ಬರು ರಸಗುಲ್ಲಾ ಕಡಿಮೆಯಾಗಿದೆ ಎಂದು ಜೋರಾಗಿ ಕೂಗಿ ಹೇಳಿದ್ದು ಜಗಕ್ಕೆ ಕಾರಣವಾಗಿತ್ತು. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಶಂಸಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.