ಸಮಗ್ರ ಉದ್ಯೋಗ: Bureau of Indian Standards ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ಸೈಂಟಿಸ್ಟ್- ಬಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಮೊದಲು ನವೆಂಬರ್ 3, 2023 ಅರ್ಜಿ ಹಾಕಲು ಕೊನೆಯ ದಿನವಾಗಿತ್ತು. ಬಳಿಕ ಆ ದಿನಾಂಕವನ್ನು ನವೆಂಬರ್ 20ಕ್ಕೆ ವಿಸ್ತರಿಸಲಾಗಿದೆ. ಇನ್ನಷ್ಟು ಮಾಹಿತಿ ನಿಮಗಾಗಿ.
ಹುದ್ದೆಯ ಮಾಹಿತಿ:
ಸಿವಿಲ್ ಎಂಜಿನಿಯರಿಂಗ್- 3
ಎಲೆಕ್ಟ್ರಿಕಲ್ ಎಂಜಿನಿಯರಿಂಗ್- 3
ಟೆಕ್ಸ್ಟೈಲ್ ಎಂಜಿನಿಯರಿಂಗ್- 1
ಅಗ್ರಿಕಲ್ಚರ್ ಸೈನ್ಸ್- 2
ವಿದ್ಯಾರ್ಹತೆ:
ಸಿವಿಲ್ ಎಂಜಿನಿಯರಿಂಗ್- ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
ಎಲೆಕ್ಟ್ರಿಕಲ್ ಎಂಜಿನಿಯರಿಂಗ್- ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ
ಟೆಕ್ಸ್ಟೈಲ್ ಎಂಜಿನಿಯರಿಂಗ್- ಟೆಕ್ಸ್ಟೈಲ್ ಎಂಜಿನಿಯರಿಂಗ್ & ಫೈಬರ್ ಸೈನ್ಸ್ನಲ್ಲಿ ಪದವಿ
ಅಗ್ರಿಕಲ್ಚರ್ ಸೈನ್ಸ್- ಅಗ್ರಿಕಲ್ಚರ್ನಲ್ಲಿ ಪದವಿ, ಸ್ನಾತಕೋತ್ತರ ಪದವಿ
ವಯೋಮಿತಿ:
ಭಾರತೀಯ ಮಾನಕ ಬ್ಯೂರೋ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 3, 2023ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PwBD (UR) ಅಭ್ಯರ್ಥಿಗಳು: 10 ವರ್ಷಗಳು
PwBD (OBC) ಅಭ್ಯರ್ಥಿಗಳು: 13 ವರ್ಷಗಳು
PwBD (SC/ST) ಅಭ್ಯರ್ಥಿಗಳು: 15 ವರ್ಷಗಳು
ವೇತನ:
ಮಾಸಿಕ ₹ 1,05,033
ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ಆಯ್ಕೆ ಪ್ರಕ್ರಿಯೆ:
ಗೇಟ್ ಮಾರ್ಕ್ಸ್
ವೈಯಕ್ತಿಕ ಸಂದರ್ಶನ
https://www.services.bis.gov.in/php/BIS_2.0/ online ಮೂಲಕ ಅರ್ಜಿ ಹಾಕಿ.