ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಪ್ರಾದೇಶಿಕ ಕಚೇರಿ ಉದ್ಘಾಟನೆ ಮತ್ತು ತೆಂಗು ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮ ನ.16ರಂದು ಮಂಗಳೂರಿನ ಮರೋಲಿ ಸೂರ್ಯನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಶಾಖ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಕೃಷಿ ಸಂಶೋಧನಾ ಪ್ರಶಸ್ತಿ ಪುರಸ್ಕೃತರು, ಜಿಲ್ಲಾ ರಾಜ್ಯೋತ್ಸವ, ಹವ್ಯಕರತ್ನ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಜಿಲ್ಲಾ ಮಟ್ಟದ ಪ್ರಗತಿ ಪರ ಪ್ರಶಸ್ತಿ ಪಡೆದ ಕುಮಾರ್ ಪೆರ್ನಾಜೆಯವರನ್ನು ತೆಂಗು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಕುಸುಮಾದರ ಎಸ್.ಕೆ. ಗಣ್ಯರ ಸಮ್ಮುಖದಲ್ಲಿ ನೇಮಕ ಮಾಡಿದರು. ಜೇನು ತಜ್ಞ, ಜೇನು ಗಡ್ಡದಾರಿ ಸಾಹಿತ್ಯ ಬರಹ ಲಲಿತ ಕಲೆಗಳ ಪೋಷಕರಾಗಿದ್ದು ಚುಟುಕು ಸಾಹಿತ್ಯ ಪರಿಷತ್ ಸದಸ್ಯರು ಕೂಡ ಆಗಿದ್ದಾರೆ.