ಈಗಾಗಲೇ ಕ್ಲರ್ಕ್ ಅಥವಾ Junior Associates ವಾಣಿಜ್ಯ ಹಾಗೂ ಗ್ರಾಹಕ ಸಹಕಾರ ಹುದ್ದೆಗಳಿಗೆ ನೇಮಕಕ್ಕೆ ಸಂಬಂಧಿಸಿದಂತೆ ಅಧಿಕೃತ ಪ್ರಕಟಣೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಕಟಿಸಿತ್ತು. ನೇಮಕ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ನವೆಂಬರ್ 17ರ ಶುಕ್ರವಾರದಿಂದ ಅವಕಾಶ ನೀಡಿತ್ತು. ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದ್ದರೆ ಎಸ್‌ಬಿಐನ ಅಧಿಕೃತ ವೆಬ್‌ಸೈಟ್ sbi.co.in ಮೂಲಕವೇ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 7ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಸ್ವೀಕರಸಲಾದ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಲು ಡಿಸೆಂಬರ್ 22ರವರೆಗೆ ಅವಕಾಶ ನೀಡಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಯಾವುದಾದರೂ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು. ಇಲ್ಲವೇ ಕೇಂದ್ರ ಸರ್ಕಾರ ಗುರುತಿಸಿರುವ ಸಮಾನ ವಿದ್ಯಾರ್ಹತೆಯಿದ್ದವರಿಗೂ ಅವಕಾಶವಿದೆ. ಅರ್ಜಿ ಸಲ್ಲಿಸಲು 20 ರಿಂದ 28 ವರ್ಷ ವಯಸ್ಸಿನವರು ಅರ್ಹರು. ಕೊನೆ ವರ್ಷದ ಪದವಿ ಓದುತ್ತಿರುವವರೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ವೇತನ ಶ್ರೇಣಿಯು19,900 ಮೂಲ ವೇತನ ಹಾಗೂ ಎರಡು ಇನ್‌ಕ್ರಿಮೆಂಟ್ ಜತೆಗೆ ಆರಂಭವಾಗಲಿದೆ. ಸಾಮಾನ್ಯ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 750 ರೂ. ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿಯಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದ ನಂತರ 2024ರ ಜನವರಿಯಲ್ಲಿ ಪ್ರಿಲಿಮ್ಸ್ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ. 2024ರ ಫೆಬ್ರವರಿಯಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ. ಈ ಎರಡೂ ಪರೀಕ್ಷೆಗಳ ದಿನಾಂಕವನ್ನು ಎಸ್‌ಬಿಐ ಇನ್ನೂ ಪ್ರಕಟಣೆ ಮಾಡಿಲ್ಲ. ಈ ಮಾಸಾಂತ್ಯ ಅಥವಾ ಡಿಸೆಂಬರ್‌ನಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಈ ಕುರಿತು ನಿಖರ ಮಾಹಿತಿಗಾಗಿ ಆಗಾಗ ಎಸ್‌ಬಿಐ ನ ಅಧಿಕೃತ ವೆಬ್‌ಸೈಟ್ ವೀಕ್ಷಿಸಬಹುದು.
ಎಸ್‌ಬಿಐನ ವೆಬ್‌ಸೈಟ್‌ಗೆ sbi.co.in ಗೆ ಹೋಗಿ
ಅಲ್ಲಿನ ಹೋಂ ಪೇಜ್‌ನಲ್ಲಿರುವ ಎಸ್‌ಬಿಐ ಕ್ಲರ್ಕ್ ನೇಮಕ 2023 ಲಿಂಕ್ ಕ್ಲಿಕ್ ಮಾಡಿ
ಒಳ ಹೋದ ನಂತರ ನೋಂದಣಿ ವಿವರ ದಾಖಲಿಸಿದ ನಂತರ ಸಬ್ಮಿಟ್ ಕೊಡಿ
ಅಲ್ಲಿರುವ ಅರ್ಜಿ ಮಾದರಿಯನ್ನು ನಿಖರ ಮಾಹಿತಿಯೊಂದಿಗೆ ತುಂಬಿರಿ. ಪರೀಕ್ಷಾ ಶುಲ್ಕಗಳನ್ನು ತುಂಬಿಕೊಳ್ಳಿ
ಈ ಎಲ್ಲ ಪ್ರಕ್ರಿಯೆ ಮುಗಿದ ನಂತರ ಆ ಪುಟವನ್ನು ಡೌನ್ ಲೋಡ್ ಮಾಡಿಟ್ಟುಕೊಳ್ಳಿ
ಮುಂದಿನ ಅಗತ್ಯಗಳಿಗೆ ಈ ಪುಟವನ್ನು ಪ್ರಿಂಟ್ ಮಾಡಿಕೊಳ್ಳುವುದು ಒಳ್ಳೆಯದು.