ಸಮಗ್ರ ನ್ಯೂಸ್: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸತತ 10 ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಶಮಿ 7 ವಿಕೆಟ್ ಕಬಳಿಸಿ ಭಾರತದ ಗೆಲುವಿನ ರೂವಾರಿಯಾಗಿದ್ದಾರೆ. ಜೊತೆಗೆ ಹಲವು ದಾಖಲೆ ಬರೆದಿದ್ದಾರೆ.
ಭಾರತದ ಪರ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಅನ್ನೋ ದಾಖಲೆ ಶಮಿ ಬರೆದಿದ್ದಾರೆ. ಏಕದಿನದಲ್ಲಿ ಭಾರತದ ಪರ ದಾಖಲಾದ ಅತ್ಯುತ್ತಮ ಬೌಲಿಂಗ್ ದಾಖಲೆ ಇದಾಗಿದೆ. ಏಕದಿನ ವಿಶ್ವಕಪ್ನಲ್ಲಿನ 5ನೇ ಅತ್ಯುತ್ತಮ ಬೌಲಿಂಗ್ ದಾಖಲೆ ಅನ್ನೋ ಹೆಗ್ಗಳಿಕೆಗೂ ಶಮಿ ಪಾತ್ರರಾಗಿದ್ದಾರೆ.
ವಿಶ್ವಕಪ್ ಟೂರ್ನಿಯ ಒಂದು ಆವೃತ್ತಿಯಲ್ಲಿ ಗರಿಷ್ಠ ವಿಕೆಟ್ ಸಾಧನೆ
ಮಿಚೆಲ್ ಸ್ಟಾರ್ಕ್ : 27 ವಿಕೆಟ್(2019)
ಗ್ಲೆನ್ ಮೆಗ್ರಾಥ್ : 26 ವಿಕೆಟ್(2007)
ಚಾಮಿಂಡ ವಾಸ್ : 23 ವಿಕೆಟ್(2003)
ಮುತ್ತಯ್ಯ ಮುರಳೀಧರನ್ : 23 ವಿಕೆಟ್(2007)
ಶಾನ್ ಟೈನ್ : 23 ವಿಕೆಟ್ (2007)
ಮೊಹಮ್ಮದ್ ಶಮಿ : 23 ವಿಕೆಟ್(2023)
ಜಹೀರ್ ಖಾನ್ : 21 ವಿಕೆಟ್(2011)
ಭಾರತದ ಪರ ದಾಖಲಾದ ಏಕದಿನದ ಅತ್ಯುತ್ತಮ ಬೌಲಿಂಗ್ ಇದಾಗಿದೆ. ಇದಕ್ಕೂ ಮೊದಲು ಸ್ಟುವರ್ಟ್ ಬಿನ್ನಿ 2014ರಲ್ಲಿ ಬಾಂಗ್ಲಾದೇಶ ವಿರುದ್ಧ ಕಬಳಿಸಿದ 6 ವಿಕೆಟ್ ಮೊದಲ ಸ್ಥಾನದಲ್ಲಿತ್ತು. ಇದೀಗ ಶಮಿ 7 ವಿಕೆಟ್ ಮೊದಲ ಸ್ಥಾನ ಪಡೆದುಕೊಂಡಿದೆ.
ಏಕದಿನದಲ್ಲಿ ಭಾರತದ ಬೆಸ್ಟ್ ಬೌಲಿಂಗ್
ಮೊಹಮ್ಮದ್ ಶಮಿ: 7/57 (2023)
ಸ್ಟುವರ್ಟ್ ಬಿನ್ನಿ: 6/4 (2014)
ಅನಿಲ್ ಕುಂಬ್ಳೆ : 6/12 (1993)
ಜಸ್ಪ್ರೀತ್ ಬುಮ್ರಾ: 6/19 (2022)
ಮೊಹಮ್ಮದ್ ಸಿರಾಜ್ : 6/21 (2023)
ವಿಶ್ವಕಪ್ ಟೂರ್ನಿಯಲ್ಲಿ ಬೆಸ್ಟ್ ಬೌಲಿಂಗ್ ಪಟ್ಟಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಶಮಿ ನೀಡಿದ ಪ್ರದರ್ಶನ 5ನೇ ಸ್ಥಾನ ಪಡೆದುಕೊಂಡಿದೆ.
ವಿಶ್ವಕಪ್ ಟೂರ್ನಿಯಲ್ಲಿ ಬೆಸ್ಟ್ ಬೌಲಿಂಗ್
ಗ್ಲೆನ್ ಮೆಗ್ರಾಥ್ : 7/15 (2003)
ಟಿಮ್ ಸೌಥಿ : 7/20 (2003)
ಟಿಮ್ ಸೌಥಿ : 7/33 (2015)
ವಿನ್ಸ್ಟನ್ ಡೇವಿಸ್: 7/51 (1983)
ಮೊಹಮ್ಮದ್ ಶಮಿ : 7/57 (2023)