Ad Widget .

ವಿಶ್ವಕಪ್: ಹಲವು ದಾಖಲೆಗಳನ್ನು ಉಡೀಸ್ ಮಾಡಿದ ಕೊಹ್ಲಿ

ಸಮಗ್ರ ನ್ಯೂಸ್: ಭಾರತ ತಂಡ ಸ್ಟಾರ್ ಬ್ಯಾಟರ್​ ವಿರಾಟ್​ ಕೊಹ್ಲಿ ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಅವರ ವಿಶ್ವ ಕಪ್​ನಲ್ಲಿ ಸೃಷ್ಟಿಸಿದ್ದ ದಾಖಲೆಯೊಂದನ್ನು ಮುರಿದಿದ್ದಾರೆ. ಅವರೀಗ ವಿಶ್ವ ಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ 50 ಪ್ಲಸ್ ಸ್ಕೋರ್ ಬಾರಿಸಿದ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ನ್ಯೂಜಿಲ್ಯಾಂಡ್​ ವಿರುದ್ಧದ ಸೆಮಿ ಫೈನಲ್​ ಪಂದ್ಯದಲ್ಲಿ ಅವರು ಅರ್ಧ ಶತಕ ಬಾರಿಸಿದ ತಕ್ಷಣ ಅವರು ಈ ಸಾಧನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ 2023ರ ವಿಶ್ವ ಕಪ್​ನಲ್ಲಿ ಒಟ್ಟು 8 ಬಾರಿ 50 ಪ್ಲಸ್ ಸ್ಕೋರ್ ಬಾರಿಸಿದಂತಾಗಿದೆ. ಇದರೊಂದಿಗೆ ಅವರು ಏಳು ಫಿಪ್ಟಿ ಫ್ಲಸ್ ಸ್ಕೋರ್ ಬಾರಿಸಿದ ಸಚಿನ್ ಅವರು ದಾಖಲೆಯನ್ನು ಮುರಿದಿದ್ದಾರೆ. 2019ರ ವಿಶ್ವ ಕಪ್​ನಲ್ಲಿ ಏಳು ಬಾರಿ ಫಿಫ್ಟಿ ಪ್ಲಸ್​ ಸ್ಕೋರ್​ ಮಾಡಿದ್ದರು. 2019ರಲ್ಲಿ ಆರು ಬಾರಿ ಫಿಫ್ಟಿ ಪ್ಲಸ್​ ಸ್ಕೋರ್​ ಬಾರಿಸಿದ ರೋಹಿತ್​ ಶರ್ಮಾ, ಡೇವಿಡ್​ ವಾರ್ನರ್​ ನಂತರದ ಸ್ಥಾನದಲ್ಲಿದ್ದಾರೆ.

Ad Widget . Ad Widget . Ad Widget .

ಟೀಮ್ ಇಂಡಿಯಾದ ನಾಯಕ, ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ(Rohit Sharma) ಅವರು ನ್ಯೂಜಿಲ್ಯಾಂಡ್​ ವಿರುದ್ಧ ಸಾಗುತ್ತಿರುವ ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ವಿಶ್ವಕಪ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಮುಂಬಯಿಯ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಭಾರತಕ್ಕೆ ರೋಹಿತ್​ ಶರ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಒದಗಿಸಿದ್ದಾರೆ. ಟ್ರೆಂಟ್​ ಬೌಲ್ಟ್​ ಅವರ ಓವರ್​ನಲ್ಲಿ ಸಿಕ್ಸರ್​ ಬಾರಿಸುವ ಮೂಲಕ ವಿಶ್ವಕಪ್​ ಕ್ರಿಕೆಟ್​ನಲ್ಲಿ 50 ಸಿಕ್ಸರ್​ ದಾಖಲಿಸಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದರು. ಈ ಹಿಂದೆ 49 ಸಿಕ್ಸರ್​ ಬಾರಿಸಿದ್ದ ವೆಸ್ಟ್​ ಇಂಡೀಸ್​ ಕ್ರಿಸ್​ ಗೇಲ್​ ದಾಖಲೆ ಪತನಗೊಂಡಿತು.

Leave a Comment

Your email address will not be published. Required fields are marked *