Ad Widget .

ಅತಿ ದೊಡ್ಡ ಎಣ್ಣೆ ಮಾಫಿಯಾ ಜಾಲ ಭೇಧಿಸಿದ ದ.ಕ ಪೊಲೀಸ್, ನಾಲ್ಕು ‌ಮಂದಿ ಅರೆಸ್ಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೃಹತ್ ಆಯಿಲ್ ದಂಧೆಯೊಂದನ್ನು ಪೊಲೀಸರು ಭೇದಿಸಿದ್ದಾರೆ. ಟ್ಯಾಂಕರ್ ಚಾಲಕರೊಂದಿಗೆ ಒಪ್ಪಂದ ಮಾಡಿಕೊಂಡು ಆಯಿಲ್ ದಂಧೆ ನಡೆಸುತ್ತಿದ್ದ ಘಟಕದ ಮೇಲೆ ಪೊಲೀಸ್ ದಾಳಿ ನಡೆಸಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಬಳಿ ಸೋಮವಾರ ಪುತ್ತೂರು ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಡಾ. ಗಾನ ಪಿ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಎಸ್.ದಾಸ್, ಸಿಂಗರಾಜ್, ಎಸ್.ಕಾರ್ತಿ ಮತ್ತು ಸೆಲ್ವ ರಾಜ್ ಎಂಬುವರನ್ನು ಬಂಧಿಸಲಾಗಿದೆ.
ಪೊಲೀಸ್ ದಾಳಿಯ ವೇಳೆ ಮನೆಯ ಒಳಗೆ ಭಾರೀ ಗಾತ್ರದ ಭೂಗತ ಟ್ಯಾಂಕ್ ಗಳು ಪತ್ತೆಯಾಗಿದ್ದು, ಮಂಗಳೂರು – ಬೆಂಗಳೂರು ಮಾರ್ಗವಾಗಿ ಸಾಗಿಸುವ ಕೆಲವು ಫರ್ನೆಸ್ ಆಯಿಲ್ ಟ್ಯಾಂಕರ್ ಗಳ ಚಾಲಕರೊಂದಿಗೆ ಹಣಕ್ಕಾಗಿ ಒಪ್ಪಂದ ಮಾಡಿಕೊಂಡಿರುವ ವಿಚಾರವೂ ಬೆಳಕಿಗೆ ಬಂದಿದೆ.
ಒಪ್ಪಂದ ಮಾಡಿಕೊಂಡು ಮಣ್ಣಗುಂಡಿ ಮನೆಗೆ ಕರೆಸಿ ಪ್ರತೀ ಟ್ಯಾಂಕರ್ ನಿಂದ 50 ರಿಂದ 200 ಲೀಟರ್ ಫರ್ನೆಸ್ ಆಯಿಲ್ ಅನ್ ಲೋಡ್ ಮಾಡಿಕೊಂಡು ಟ್ಯಾಂಕರ್ ನಿಂದ ಭೂಗತ ಟ್ಯಾಂಕ್ ಗೆ ತುಂಬಿಸಿ ಬಳಿಕ ಅಲ್ಲಿಂದ ಬೇರೆ ಖಾಲಿ ಟ್ಯಾಂಕರ್ ಮೂಲಕ ಚೆನ್ನೈ ಸೇರಿ ಇತರೆಡೆ ಸಾಗಾಟ ಮಾಡುತ್ತಿದ್ದರು.

Ad Widget . Ad Widget . Ad Widget .

ಪಾಂಡಿ ಮತ್ತು ರಘುನಾಥನ್ ಎಂಬವರೊಂದಿಗೆ ಸೇರಿಕೊಂಡು ಧಂದೆ ನಡೆಸುತ್ತಿದ್ದು, ಇದೀಗ ಇಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಭೂಗತ 2 ಟ್ಯಾಂಕುಗಳ 04 ಕಂಪಾರ್ಟ್ ಮೆಂಟ್ ನಿಂದ ಸುಮಾರು 10,500 ಲೀಟರ್ ದಾಸ್ತಾನು ಇರಿಸಿದ ಫರ್ನಿಶ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ.

ಎರಡು ಟ್ಯಾಂಕರ್ ಸಹಿತ 35 ಲಕ್ಷ ಮೌಲ್ಯದ ಸೊತ್ತುಗಳು ಪೊಲೀಸ್ ವಶಪಡಿಸಿಕೊಂಡಿದ್ದು, ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಐಪಿಸಿ 379,417,420,287 ಮತ್ತು ಪೆಟ್ರೋಲಿಯಮ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

Leave a Comment

Your email address will not be published. Required fields are marked *