ಸಮಗ್ರ ನ್ಯೂಸ್: ದೇಶವೇ ದೀಪಗಳಿಂದ ಜಗಮಗಿಸುತ್ತಿದ್ದು, ಎಲ್ಲೆಡೆ ಬೆಳಕಿನ-ಸುಡುಮದ್ದುಗಳ ಸಡಗರ ಕಂಡುಬರುತ್ತಿದ್ದರೆ ಇಲ್ಲೊಂದು ಕಡೆ ಮಾತ್ರ ವರ್ಷಗಟ್ಟಲೆ ಕಾಲದಿಂದ ದೀಪಾವಳಿ ಹಬ್ಬ ಆಚರಣೆಯನ್ನೇ ಮಾಡಿಲ್ಲ.
ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆ ಗ್ರಾಮವೇ ಇಂಥದ್ದೊಂದು ಬೆಳವಣಿಗೆಗೆ ಸಾಕ್ಷಿಯಾಗಿದೆ. ಇಲ್ಲಿನ ಅಯ್ಯಂಗಾರ್ ಸಮುದಾಯ ಸುಮಾರು 230 ವರ್ಷಗಳಿಂದ ದೀಪಾವಳಿ ಹಬ್ಬ ಆಚರಿಸುತ್ತಿಲ್ಲ.
ನರಕ ಚತುರ್ದಶಿಯ ವಾರ್ಷಿಕ ಹಬ್ಬ ಆಚರಿಸಲು 1790ರಲ್ಲಿ ಶ್ರೀರಂಗಪಟ್ಟಣದ ನರಸಿಂಹ ದೇವಸ್ಥಾನದ ಆವರಣದಲ್ಲಿ ನೆರೆದಿದ್ದ 800 ಅಮಾಯಕ ನಿರಾಯುಧ ಅಯ್ಯಂಗಾರ್ ಬ್ರಾಹ್ಮಣರನ್ನು ಟಿಪ್ಪು ಸುಲ್ತಾನ್ ಹತ್ಯೆ ಮಾಡಿಸಿದ್ದನು.
ಅಂದು ಟಿಪ್ಪು ಸುಲ್ತಾನ್ ಮೇಲುಕೋಟೆಯ ಈ 800 ಮನೆಗಳ ದೀಪಗಳನ್ನು ನಂದಿಸಿದ್ದು, ಇಂದಿಗೂ ಇಲ್ಲಿನ ಜನರ ಹೃದಯದಲ್ಲಿ ಆ ನೋವು ಮಾಸಿಲ್ಲ. ತಮ್ಮ ಪೂರ್ವಜರ ಸ್ಮರಣೆಯಲ್ಲಿ ಮೇಲುಕೋಟೆ ಗ್ರಾಮದ ಅಯ್ಯಂಗಾರ್ ಬ್ರಾಹ್ಮಣರೂ ಇಂದಿಗೂ ದೀಪಾವಳಿ ಆಚರಿಸುತ್ತಿಲ್ಲ.