ಸಮಗ್ರ ನ್ಯೂಸ್: ರಾಜ್ಯದ ಶ್ರೀಮಂತ ದೇಗುಲ ವೆಂದೇ ಖ್ಯಾತಿ ಪಡೆದಿರುವ ಅತೀ ಹೆಚ್ಚು ಆದಾಯದ ದೇವಸ್ಥಾನ ಎಂಬ ಹಿರಿಮೆಗೆ ಪಾತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಕೆಗೆ ಖರೀದಿಸಿದ್ದ ಕಾರು ಕಳೆದ 4 ವರ್ಷಗಳಿಂದ ಬೆಂಗಳೂರಿನಲ್ಲಿ ಓಡಾಡುತ್ತಿದ್ದರೆ ವಾಹನ ನಿರ್ವಾಹಣಾ ವೆಚ್ಚ ಮಾತ್ರ ಇವತ್ತಿಗೂ ದೇವಳದ ಖಾತೆಯಿಂದಲೇ ಭರಿಸಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆ ಪುರಾಣ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇಶ-ವಿದೇಶದಿಂದ ಗಣ್ಯರು, ಹಿರಿಯ ಅಧಿಕಾರಿಗಳು ಆಗಾಗ ಬರುತ್ತಿರುತ್ತಾರೆ. ಇದೇ ಕಾರಣಕ್ಕೆ, ತುರ್ತು ಉಪಯೋಗಕ್ಕೆಂದು 2019ರಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಇನ್ನೋವಾ ಕ್ರಿಸ್ಟಾ ಕಾರನ್ನು ಖರೀದಿಸಲಾಗಿತ್ತು. ಈ ವಾಹನವನ್ನು ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಳಕೆ ಮಾಡುತ್ತಿದ್ದರು.
ಆದರೆ,ಖರೀದಿ ಮಾಡಿದ ಎರಡೇ ತಿಂಗಳಲ್ಲಿ ಈ ಕಾರು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದು, ಸರಕಾರದ ಮಟ್ಟದಲ್ಲಿ ನಡೆಯುವ ಸಭೆಗಳು, ನ್ಯಾಯಾಲಯವ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲಾಖಾಧಿಕಾರಿಗಳು ಹಾಜರಾಗಲು ಅನುಕೂಲವಾಗುವಂತೆ ತಾತ್ಕಾಲಿಕವಾಗಿ ವಾಹನವನ್ನು ಆಯುಕ್ತರ ಕಚೇರಿಗೆ ಕಳುಹಿಸಿಕೊಡಲು ಸೂಚನೆ ಬಂದಿತ್ತು. ಒಂದು ವೇಳೆ ವಾಹನ ಕಳಿಸಿ ಕೊಡದಿದ್ದರೆ, ಎಂದು 2019ರ 6.12ರಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಎಚ್ಚರಿಸಿದ್ದರು.
ಇದಕ್ಕೆ ಹೆದರಿದ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕಾರಿಗಳು. 2019ರ ಡಿ. 13ರಂದೇ ವಾಹನವನ್ನು ಕಳುಹಿಸಿಕೊಟ್ಟಿದ್ದರು. ಕುತೂಹಲಕಾರಿ ವಿಚಾರ ಅಂದ್ರೆ ದೇವಸ್ಥಾನದವರು ಕೊಟ್ಟ ಕಾರು ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ಓಡಾಡುತ್ತಿದ್ದರೂ, ಪ್ರತಿವರ್ಷ ಇನ್ಶೂರೆನ್ಸ್ ಮೊತ್ತ, ಸಿಗ್ನಲ್ ಜಂಪ್ ಸೇರಿದಂತೆ ಮೋಟಾರು ವಾಹನ ನಿಯಮಗಳ ಉಲ್ಲಂಘನೆಗೆ ನೀಡಲಾಗುವ ಎಲ್ಲಾ ನೋಟಿಸ್ ಗಳು ದೇವಸ್ಥಾನಕ್ಕೆ ಬರುತ್ತಿದೆ. ಹಲವು ಬಾರಿ ದಂಡದ ಮೊತ್ತವನ್ನು ದೇವಳ ಖಾತೆಯಿಂದ ಸಂದಾಯ ಮಾಡಲಾಗಿದೆ. ವಾಹನ ಬೆಂಗಳೂರಿಗೆ ಹೋದ ಬಳಿಕ 2 ತಿಂಗಳಿಗೊಮ್ಮೆ 50 ಸಾವಿರ ರೂ.ವನ್ನು ನಿರ್ವಹಣೆ ಹಾಗೂ ಇತರ ಖರ್ಚು ಎಂದು ದೇವಸ್ಥಾನದಿಂದಲೇ ನಿರ್ವಹಣೆ ಮಾಡಲಾಗುತ್ತಿದೆ. ಬೆಂಗಳೂರು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಕಚೇರಿಯಲ್ಲಿ ಬಳಕೆ ಮಾಡಿ ಅದರ ನಿರ್ವಹಣೆಗೆ ಮೊತ್ತವನ್ನು ದೇವಸ್ಥಾನದ ಖಾತೆಯಿಂದ ವಸೂಲಿ ಮಾಡುತ್ತಿರುವುದಕ್ಕೆ ವೇಳೆ ಲೆಕ್ಕಪರಿಶೋದಕರು, ಅಧಿಕಾರಿಗಳು ಆಕ್ಷನ ವ್ಯಕ್ತಪಡಿಸಿದರು. ಅದರಿಂದ 2 ತಿಂಗಳಿಗೊಮ್ಮೆ ಸಲ್ಲಿಕೆಯಾಗುತ್ತಿದ್ದ ನಿರ್ವಹಣಾ ಮೊತ್ತ 50 ಸಾವಿರ ರೂ.ಗೆ ತಡೆ ಬಿದ್ದಿದೆ, ಇತರ ಮೊತ್ತಗಳು ಈಗಲೂ ದೇವಳದಿಂದ ಸಂದಾಯವಾಗುತ್ತಿದೆ ಎಂದು ಮೂಲಗಳು ತಿಳಿಸಿದೆ. ಭಕ್ತರ ದುಡ್ಡಿನಿಂದ ಖರೀದಿ ಮಾಡಿ ದೇವಳದ ಅಗತ್ಯಕ್ಕೆ ಖರೀದಿಸಿದ್ದ ಈ ಕಾರು ಬೆಂಗಳೂರಿನಲ್ಲಿ ಓಡಾಟ ಮಾಡುತ್ತಿರುವುದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು ಕೂಡಲೇ ಕಾರನ್ನು ದೇವಳಕ್ಕೆ ಹಿಂದಿರುಗಿಸಬೇಕೆಂದು ಆಗ್ರಹಿಸಿದ್ದಾರೆ.