Ad Widget .

ಏಕದಿನ ಸರಣಿ: ಇಂಗ್ಲೆಂಡ್ ಅಬ್ಬರಕ್ಕೆ ಶ್ರೀಲಂಕಾ‌ ತತ್ತರ

ಟಿ20 ಸರಣಿಯ ನಂತರ ಏಕದಿನ ಸರಣಿಯಲ್ಲಿಯೂ ಇಂಗ್ಲೆಂಡ್ ಶ್ರೀಲಂಕಾ ವಿರುದ್ಧ ಅಬ್ಬರಿಸಿದೆ. ಮಂಗಳವಾರ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಶ್ರೀಲಂಕಾ ತಂಡದ ವಿರುದ್ಧ ಐದು ವಿಕೆಟ್‌ಗಳ ಅಂತರದ ಜಯವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ನಾಯಕ ಕುಸಾಲ್ ಪೆರೆರ ಹಾಗೂ ಹಸರಂಗ ಅವರ ಅದ್ಭುತ 99 ರನ್‌ಗಳ ಅದ್ಭುತ ಜೊತೆಯಾಟದ ಹೊರತಾಗಿಯೂ ಶ್ರೀಲಂಕಾ ದೊಡ್ಡ ಮೊತ್ತವನ್ನು ಗಳಿಸಲು ವಿಫಲವಾಗಿತ್ತು. ಶ್ರೀಲಂಕಾ ಪರವಾಗಿ ಈ ಇಬ್ಬರು ಆಟಗಾರರನ್ನು ಹೊರತುಪಡಿಸಿದರೆ ಯಾವ ಆಟಗಾರನಿಂದಲೂ ಉತ್ತಮ ರನ್‌ ಕೊಡುಗೆ ದೊರೆಯಲೇ ಇಲ್ಲ.

Ad Widget . Ad Widget . Ad Widget .

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಶ್ರೀಲಂಕಾ ಆರಂಭದಲ್ಲಿಯೇ ಆಘಾತಕ್ಕೆ ಒಳಗಾಯಿತು. ಪತುಮ್ ನಿಸ್ಸಂಕ ಕೇವಲ ೫ ರನ್‌ಗಳ ಕೊಡುಗೆಯನ್ನು ನೀಡಿ ಫೆವಿಲಿಯನ್ ಸೇರಿದರು. ನಂತರ ಅಲಸಂಕ ಹಾಗೂ ಶನಕ ಕೂಡ ಒಬ್ಬರ ಹೊಂದೊಬ್ಬರಂತೆ ಫೆವಿಲಿಯನ್ ಸೇರಿದರು.
ಆದರೆ ಬಳಿಕ ಪೆರೆರ ಹಾಗೂ ಹಸರಂಗ ಜೋಡಿ ಲಂಕಾ ಇನ್ನಿಂಗ್ಸ್‌ಗೆ ಉತ್ತಮ ಚೇತರಿಕೆಯನ್ನು ನೀಡಿದರು. ಇಬ್ಬರು ಬ್ಯಾಟ್ಸ್‌ಮನ್‌ಗಳು ಕೂಡ ತಲಾ ಅರ್ಧ ಶತಕವನ್ನು ದಾಖಲಿಸಿದರು.

ಆದರೆ ಈ ಜೋಡಿ ಬೇರ್ಪಟ್ಟ ನಂತರ ಮತ್ತೆ ಲಂಕಾ ತಂಡದ ಕುಸಿತ ಆರಂಭವಾಗಿತ್ತು. ಲಂಕಾ ಇನ್ನಿಂಗ್ಸ್‌ನಲ್ಲಿ ಪೆರೆರ(73 ರನ್) ಹಾಗೂ ಹಸರಂಗ(54 ರನ್) ಇಬ್ಬರು ಆಟಗಾರರನ್ನು ಹೊರತುಪಡಿಸಿದರೆ ಕರುಣರತ್ನೆ(19 ರನ್) ಮಾತ್ರವೇ ಎರಡಂಕಿ ದಾಟಿದ ಆಟಗಾರ ಎನಿಸಿದರು.

ಇನ್ನು ಈ ಮೊತ್ತವನ್ನು ಇಂಗ್ಲೆಂಡ್ 35 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಉಳಿಸಿಕೊಂಡು ಜಯ ಸಾಧಿಸಿತು. ಇಂಗ್ಲೆಂಡ್ ಪರವಾಗಿ ಜೋ ರೂಟ್ ಅಜೇಯ 79 ರನ್‌ಗಳ ಕೊಡುಗೆಯನ್ನು ನೀಡಿದರು. ಇಂಗ್ಲೆಂಡ್ ಪರವಾಗಿ ಬೌಲಿಂಗ್‌ನಲ್ಲಿ ಕ್ರಿಸ್ ವೋಕ್ಸ್ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಲಂಕಾ ಪರವಾಗಿ ದುಷ್ಮಂತ ಚಾಮೀರಾ 3 ವಿಕೆಟ್ ಕಬಳಿಸಿದರು.

Leave a Comment

Your email address will not be published. Required fields are marked *