Ad Widget .

‘ಒಂದು‌ ರಾಷ್ಟ್ರ, ಒಂದು ಪಡಿತರ’ ಯೋಜನೆ ಜಾರಿಗೆ ಗಡುವು ನೀಡಿದ ಸು.ಕೋ

ನವದೆಹಲಿ: ಮುಂದಿನ ಜುಲೈ 31 ರೊಳಗೆ ‘ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್’ಯೋಜನೆಯನ್ನು ಜಾರಿಗೆ ತರುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಗಡುವು ನೀಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಾಂಕ್ರಾಮಿಕ ರೋಗ ಮುಂದುವರಿಯುವವರೆಗೆ ಪಡಿತರವನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದ್ದು, ಇದರ ಜೊತೆಗೆ ವಲಸೆ ಕಾರ್ಮಿಕರನ್ನು ನೋಂದಾಯಿಸಲು ಪೋರ್ಟಲ್ ಸ್ಥಾಪಿಸುವಂತೆಯೂ ಕೇಂದ್ರಕ್ಕೆ ಸೂಚನೆ ಕೊಟ್ಟಿದೆ.

Ad Widget . Ad Widget . Ad Widget .

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ವಿಭಾಗೀಯ ಪೀಠ ಕೋವಿಡ್-19 ರಿಂದ ಬಾಧಿತರಾದ ವಲಸೆ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕೆಲ ನಿರ್ದೇಶನ ನೀಡಿದೆ.

ಈ ಯೋಜನೆಯು ವಲಸೆ ಕಾರ್ಮಿಕರಿಗೆ ಇತರ ರಾಜ್ಯಗಳಲ್ಲಿ ಅವರ ಕೆಲಸದ ಸ್ಥಳದಲ್ಲಿ ಮತ್ತು ಅವರ ಪಡಿತರ ಚೀಟಿಗಳನ್ನು ನೋಂದಾಯಿಸದ ಸ್ಥಳದಲ್ಲೂ ಪಡಿತರ ಪಡೆಯ ಬಹುದಾಗಿದೆ.
ಸಾಂಕ್ರಾಮಿಕ ಪರಿಸ್ಥಿತಿ ಇರುವವರೆಗೂ ವಲಸೆ ಕಾರ್ಮಿಕರ ನಡುವೆ ಉಚಿತವಾಗಿ ವಿತರಿಸಲು ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡುವಂತೆ ನ್ಯಾಯಪೀಠ ಕೇಂದ್ರಕ್ಕೆ ಸೂಚಿಸಿದೆ. ಸುಪ್ರೀಂ ಕೋರ್ಟ್, ರಾಷ್ಟ್ರೀಯ ಮಾಹಿತಿ ಕೇಂದ್ರದ ಸಹಾಯದಿಂದ ಜುಲೈ 31 ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸ್ಪಷ್ಟವಾಗಿ ಹೇಳಿದೆ.

Leave a Comment

Your email address will not be published. Required fields are marked *