ಸಮಗ್ರ ನ್ಯೂಸ್: ಏಕದಿನ ವಿಶ್ವಕಪ್ ಟೂರ್ನಿಯ ಶ್ರೀಲಂಕಾ ವಿರುದ್ಧ ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. 2023ರಲ್ಲಿ ಸಹಸ್ರ ರನ್ಗಳನ್ನು ಗಳಿಸುವ ಮೂಲಕ ಅತೀ ಹೆಚ್ಚು ಸಲ ಸಹಸ್ರ ರನ್ನುಗಳನ್ನು ಪೂರೈಸಿದ ಸಚಿನ್ ದಾಖಲೆಯನ್ನು ಮುರಿದು, ನೂತನ ದಾಖಲೆ ನಿರ್ಮಿಸಿದ್ದಾರೆ.
ಸಚಿನ್ ಏಳು ಬಾರಿ (1994, 96, 97, 98, 2000, 2003, 2007) ಸಾವಿರ ರನ್ನುಗಳನ್ನು ಗಳಿಸಿದ್ದು, ಇದೀಗ ಕೊಹ್ಲಿ ಎಂಟನೇ ಬಾರಿ (2011, 12, 13, 14, 17, 18, 19, 23) ಸಹಸ್ರ ರನ್ನುಗಳನ್ನು ಬಾರಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 88 ರನ್ನುಗಳನ್ನು ಪೂರೈಸುವ ಮೂಲಕ ಕೊಹ್ಲಿ ಈ ದಾಖಲೆಯನ್ನು ನಿರ್ಮಿಸಿದರು.
ಈ ಪಂದ್ಯದಲ್ಲಿ ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರ ಭರ್ಜರಿ ಬ್ಯಾಟಿಂಗ್ನಿಂದ ಭಾರತ ತಂಡವು 357 ರನ್ನುಗಳನ್ನು ಗಳಿಸಿದ್ದು, ಶ್ರೀಲಂಕಾದ ಬೌಲರ್ ಮಧುಶಂಕ ಐದು ವಿಕೆಟ್ಗಳನ್ನು ಪಡೆದು ಮಿಂಚಿದ್ದಾರೆ