ಸಮಗ್ರ ನ್ಯೂಸ್: ಪುತ್ತೂರು ಸಮೀಪದ ಬನ್ನೂರು ಕೃಷ್ಣನಗರ ಸಮೀಪದಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಕ್ಟೋಬರ್ 21ರಂದು “ಶಾರದಾ ಪೂಜೆ ಹಾಗೂ ಆಯುಧ ಪೂಜೆ” ಕಾರ್ಯಕ್ರಮ ಆಚರಿಸಲಾಯಿತು.
ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಶ್ರೀ ನಂದಿಕೇಶವ ಭಜನಾ ಮಂಡಳಿ, ಬೆದ್ರಳ ಇವರಿಂದ ಕುಣಿತ ಭಜನೆಯು ನಡೆಯಿತು. ಸವಣೂರು ವಿದ್ಯಾರಶ್ಮಿ ಶಾಲೆಯ ಪ್ರಾಂಶುಪಾಲ ಸೀತಾರಾಮ ಕೇವಳ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಭಾರ ಪ್ರಾಂಶುಪಾಲ ಶ್ರೀನಿವಾಸ್ ಹೆಚ್. ಬಿ. ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಇವರು ಗೌರವಿಸಿದರು. ಸಭೆಯಲ್ಲಿ ಎವಿಜಿ ಸಂಸ್ಥೆಯಲ್ಲಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದ ಗೋವಿಂದ ಮೇಸ್ತ್ರಿ, ನಾರಾಯಣ ಗೌಡ, ವಿಶ್ವನಾಥ, ಕೃಷ್ಣಪ್ಪ ಮೇಸ್ತ್ರಿ ಇವರಿಗೆ ಎವಿಜಿ ಎಜುಕೇಶನಲ್ ಅಂಡ್ ಚಾರಿಕೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಶ್ರೀಯುತ ಗುಡ್ಡಪ್ಪ ಗೌಡ ಬಲ್ಯ, ಪಿಟಿಎ ಅಧ್ಯಕ್ಷ ಶ್ರೀ ಗಣೇಶ್, ಎವಿಜಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ನ ಜನರಲ್ ಸೆಕ್ರೆಟರಿ ಆದ ಶ್ರೀಮತಿ ಕೆ ವಿ ಉಪಾಧ್ಯಕ್ಷೆ ಕೆ ಬಿ ಪುಷ್ಪಾವತಿ ಕಳುವಾಜೆ , ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕ ಜಯಪ್ರಕಾಶ್ ಕೆ ವಿ ಕಳುವಾ ಜೆ ಖಚಾಂಜಿ ವನಿತಾ ಇವಿ ನಿರ್ದೇಶಕ ಕೊರಗಪ್ಪ ಗೌಡ ನಿರ್ದೇಶಕ ಗಂಗಾಧರ ಗೌಡ ಅಲುಂಗುಡ, ಟಿಜಿ ದೀಕ್ಷಾ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯ್ರಮದಲ್ಲಿ ಸಂಸ್ಥೆಯ ಸಂಚಾಲಕಕೆ ವಿ ನಾರಾಯಣ, ಪೋಷಕ ವೃಂದದವರು, ಪುಟಾಣಿ ಮಕ್ಕಳು , ಡಿವಿಜಿ ಅಸೋಸಿಯೇಟ್ಸ್ ಸಿಬ್ಬಂದಿ ವರ್ಗ ಉಪಸ್ಥಿಯಲ್ಲಿದ್ದರು. ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಉಷಾ ಕಿರಣ ಕೆ.ಯಸ್ ಇವರು ಅತಿಥಿ ಪರಿಚಯ ನಡೆಸಿಕೊಟ್ಟರು, ಸಂಸ್ಥೆಯ ಶಿಕ್ಷಕಿ ಶ್ರೀಮತಿ ವನಿತಾ ಇವರು ಶ್ರೀ ನಂದಿಕೇಶ್ವರ ವಚನ ಮಂಡಳಿ ಬಿದ್ರಾಳ ಇವರ ಪರಿಚಯ ನೀಡಿದರು. ಗಾಂಧೀಜಿಯವರ ಜೀವನದ ಮಹತ್ವವನ್ನು ವಾಚಿಸಿದರು. ಸಂಸ್ಥೆಯ ನಿರ್ದೇಶಕಿ ಕೆ ವಿ ಪ್ರತಿಭಾ ದೇವಿ ವಂದಿಸಿದರು, ಸಂಸ್ಥೆಯ ಶಿಕ್ಷಕಿ ಯಶುಭ ರೈ ನಿರೂಪಿಸಿದರು.