ಸಮಗ್ರ ನ್ಯೂಸ್: ಕೊಳ್ತಿಗೆ ಗ್ರಾಮದ ಆಲಡ್ಕ ಎಂಬಲ್ಲಿ ಜೀವ ಬೆದರಿಕೆ ಒಡ್ಡಿ ಅಡಕೆ ದೋಚಿಕೊಂಡ ಪ್ರಕರಣದಲ್ಲಿ ಮಾನ್ಯ ಸುಳ್ಯ ಪ್ರಥಮದರ್ಜೆ ನ್ಯಾಯಾಲಯ ಹಾಗೂ ಕಿರಿಯ ಸಿವಿಲ್ ವಿಭಾಗದ ನ್ಯಾಯಾಧೀಶರು ಆರೋಪಿಗಳನ್ನು ಖುಲಾಸೆಗೊಳಿಸಿದೆ.
ದಿನಾಂಕ, 28/10/19 ರಂದು ಸಾಯಂಕಾಲ ಸುಮಾರು 3 ಗಂಟೆ ಸಮಯಕ್ಕೆ ಕೊಳ್ತಿಗೆ ಗ್ರಾಮದ ಆಲಡ್ಕ ಎಂಬಲ್ಲಿ ಆರೋಪಿಗಳಾದ ದಯಾನಂದ ನಾಯಕ್, ಉಮೇಶ ನಾಯಕ್, ಶಂಖರ್ ನಾರಾಯಣ ಎಂಬ ಮೂರು ಜನರು ದೂರುದಾರರಾದ ಜಯಲಕ್ಷ್ಮೀ ಕೋಮು ಗಂಡ ಸುರೇಶ್ ನಾಯಕ್ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿದ್ದು. ಬಳಿಕ ಮನೆಯೊಳಗಡೆ ಶೇಖರಿಸಿದ್ದ ಸುಮಾರು 6 ಕ್ವಿಂಟಾಲ್ ಒಣಗಿದ ಅಡಿಕೆಯನ್ನು ಬಲಾತ್ಮಕವಾಗಿ ಜೀಪ್ ಒಂದರಲ್ಲಿ ತುಂಬಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಅದನ್ನು ತಡೆದ ದೂರುದಾರರು ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿ ಅಡಿಕೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಎಂಬುದಾಗಿ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ 200, 448, 323, 504, 506 ಜೊತೆಗೆ, ತಲಾ 34ರ ಮೇರೆಗೆ ಎಸಗಿದ ಅಪರಾಧದ ಅಡಿಯಲ್ಲಿ ಪ್ರಕಾರಣವನ್ನು ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಪೂರೈಸಿದ ಅಂದಿನ ಪೊಲೀಸ್ ವೃತ್ತ ನಿರೀಕ್ಷಕರಾದ ನವೀನ್ ಚಂದ್ರ ಜೋಗಿ ಆರೋಪಿಗಳ ವಿರುದ್ಧ ಮಾನ್ಯ ಸುಳ್ಯ ನ್ಯಾಯಾಲಯಕ್ಕೆ ದೋಷಾಪರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಬಳಿಕ ತನಿಖೆಯನ್ನು ನಡೆಸಿದ ಮಾನ್ಯ ಸುಳ್ಯ ಪ್ರಥಮ ದರ್ಜೆ ನ್ಯಾಯಾಲಯ ಹಾಗೂ ಕಿರಿಯ ಸಿವಿಲ್ ವಿಭಾಗದ ನ್ಯಾಯಾಧೀಶರಾದ ಕು. ಅರ್ಪಿತಾ ಅವರು ಆರೋಪಿಗಳನ್ನು ಬಿಡುಗಡೆ ತೀರ್ಪು ನೀಡಿರುತ್ತಾರೆ. ದಿ. 31/10/23 ಆರೋಪಿಗಳ ಪರವಾಗಿ ಶ್ರೀ ಎಂ. ವೆಂಕಪ್ಪ ಗೌಡ, ವಿ. ಚಂಪಾ ಗೌಡ ರಾಜೇಶ್ ಬಿ.ಜಿ. ಹಾಗೂ ಶ್ಯಾಂಪ್ರಸಾದ್ ವಾದಿಸಿದ್ದರು.