Ad Widget .

ಬೆಂಗಳೂರು: ಅಗ್ನಿ ಅನಾಹುತಕ್ಕೆ 10ಕ್ಕೂ ಹೆಚ್ಚು ಬಸ್‌ಗಳು ಭಸ್ಮ

ಸಮಗ್ರ ನ್ಯೂಸ್: ಬೆಂಗಳೂರು ಸೋಮವಾರ ಮತ್ತೊಂದು ಬೃಹತ್ ಬೆಂಕಿ ಅವಘಡಕ್ಕೆ ಸಾಕ್ಷಿಯಾಗಿದೆ. ಪಬ್, ಪಟಾಕಿ ಗೋದಾಮಿನಲ್ಲಿ ಬೆಂಕಿ ದುರಂತ ಬೆನ್ನಲ್ಲೆ ಇದೀಗ ಬಸ್‌ಗಳಿಗೆ ಬೆಂಕಿ ಬಿದ್ದಿದೆ. ಒಟ್ಟು ಹತ್ತಕ್ಕೂ ಹೆಚ್ಚು ಬಸ್‌ಗಳು ಬೆಂಕಿಗೆ ಆಹುತಿ ಆಗಿವೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ವೀರಭದ್ರನಗರದಲ್ಲಿ‌ ನಿಲ್ಲಿಸಲಾಗಿದ್ದ ಖಾಸಗಿ ಬಸ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪಕ್ಕದಲ್ಲಿಯೇ ಶೆಡ್‌ಗಳಿದ್ದು, ಬೆಂಕಿ ಹೊತ್ತಿಕೊಂಡ ಬಗ್ಗೆ ನಿಖರ ಕಾರಣ ತಿಳಿದು ಬರಬೇಕಿದೆ. ಸ್ಥಳದಲ್ಲಿ ನಿಲ್ಲಿಸಿರುವ ಎರಡು ಬಸ್‌ಗಳಿಗೆ ಮೊದಲು ಬೆಂಕಿ ಹೊತ್ತಿಕೊಂಡು ನಂತರ ಅದು ಹತ್ತಕ್ಕೂ ಹೆಚ್ಚು ಬಸ್‌ಗಳಿಗೆ ಚಾಚಿಕೊಂಡಿತು.

Ad Widget . Ad Widget . Ad Widget .

ನೋಡು ನೋಡುತ್ತಿದ್ದಂತೆ ಆಗಸದೆತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ಚಾಚಿಕೊಂಡಿತು. ಸ್ಥಳದಲ್ಲೆಲ್ಲ ದಟ್ಟ ಹೊಗೆ ಆವರಿಸಿಕೊಂಡಿದೆ. ಸ್ಥಳೀಯರು ಹತ್ತಿರದ ಪೊಲೀಸ್ ಠಾಣೆ ಮತ್ತು ಬಿಬಿಎಂಪಿಗೆ ಮಾಹಿತಿ ತಿಳಿಸಲಾಗಿದೆ. ಸದ್ಯ ಸ್ಥಳಕ್ಕೆ ಎರಡು ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದಾರೆ. ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸುತ್ತಮುತ್ತಲಿನ ಜನರಲ್ಲಿ ಆತಂಕ ಮನೆ ಮಾಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.

ಎಸ್ ವಿ ಕೋಚ್ ಎಂಬ ಹೆಸರಿನಲ್ಲಿ ಗ್ಯಾರೇಜ್ ನಡೆಸಲಾಗುತ್ತಿತ್ತು. ಶ್ರೀನಿವಾಸ್ ಎಂಬುವರು ಹಲವು ವರ್ಷಗಳಿಂದ ಬಸ್ ಗಳ ಚಾರ್ಸಿಗೆ ಬಾಡಿ ಪಿಟ್ ಮಾಡುವ ಕೆಲಸ ಮಾಡುತ್ತಿದ್ದರು. ಕಟ್ಟಿಂಗ್ ಹಾಗೂ ವೆಲ್ಡಿಂಗ್ ಮಷಿನ್ ಗಳನ್ನ ಬಳಸಿ ಕೆಲಸ ಮಾಡಲಾಗುತ್ತಿತ್ತು ಎನ್ನಲಾಗಿದೆ. ಅದರ ಸ್ಪಾರ್ಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಇತ್ತೀಚೆಗೆ ಕೋರಮಂಗಲದ ಪಬ್‌ವೊಂದಕ್ಕೆ ಬೆಂಕಿ ಬಿದ್ದಿತ್ತು. ಅದೇ ಕಟ್ಟದಿಂದ ಕೆಳಗೆ ವ್ಯಕ್ತಿ ಜಿಗಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಅಗ್ನಿ ಅವಗಢ ನಡೆದಿದೆ.

Leave a Comment

Your email address will not be published. Required fields are marked *