ಸಮಗ್ರ ನ್ಯೂಸ್: ಇಂದು ಎರಡನೇ ಖಗೋಳ ವಿಸ್ಮಯಕ್ಕೆ ನಭೋಮಂಡಲ ಸಾಕ್ಷಿಯಾಗಲಿದೆ. ಸೂರ್ಯಗ್ರಹಣದ ಬಳಿಕ ಇಂದು ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಅ.28 ಮತ್ತು 29 ರ ಮಧ್ಯರಾತ್ರಿ ಚಂದ್ರ ಗ್ರಹಣ ಸಂಭವಿಸಲಿದೆ.
ರಾತ್ರಿ 11.31ರ ಹಾಗೆ ಗ್ರಹಣ ಆರಂಭವಾದರೂ ಅದರ ಸಂಪೂರ್ಣ ಛಾಯೆ ಮಧ್ಯರಾತ್ರಿ ಬಳಿಕವೇ ಅಂದರೆ ರಾತ್ರಿ 1.05ರ ಹಾಗೆ ಸಂಪೂರ್ಣವಾಗಿ ಆವರಿಸಿಕೊಳ್ಳಲಿದೆ. ಭಾನುವಾರ ರಾತ್ರಿ 2.24ರವರೆಗೂ ಇರಲಿದೆ. ಹೀಗಾಗಿ ಗ್ರಹಣದ ಈ ಅವಧಿ ಸುಮಾರು 1.19 ನಿಮಿಷದ್ದಾಗಿರಲಿದೆ. ಇಂದಿನ ಭಾಗಶಃ ಚಂದ್ರಗ್ರಹಣ ದೇಶಾದ್ಯಂತ ಗೋಚರಿಸಲಿದೆ.
ಚಂದ್ರ ಗ್ರಹಣ ಸಮಯ:
ಅಕ್ಟೋಬರ್ 28ರ ರಾತ್ರಿ 11.31ಕ್ಕೆ ಚಂದ್ರಗ್ರಹಣ ಆರಂಭ ಅಕ್ಟೋಬರ್ 29ರ ಮಧ್ಯರಾತ್ರಿ 3.36ಕ್ಕೆ ಚಂದ್ರಗ್ರಹಣ ಅಂತ್ಯ, ಗ್ರಹಣ ಗೋಚರ ಸಮಯ
ಗ್ರಹಣ ಸ್ಪರ್ಶಕಾಲ – ರಾತ್ರಿ 11.30 ಗ್ರಹಣ ಮಧ್ಯಕಾಲ – ಮಧ್ಯರಾತ್ರಿ 1.42 ಗ್ರಹಣ ಮೋಕ್ಷಕಾಲ – ಬೆಳಗಿನ ಜಾವ 3.30
ಚಂದ್ರಗ್ರಹಣ ಹುಣ್ಣಿಮೆಯ ದಿನ ಸಂಭವಿಸುತ್ತದೆ. ಭೂಮಿಯು ಚಂದ್ರ ಮತ್ತು ಸೂರ್ಯನ ನಡುವೆ ನಿಖರವಾಗಿ ಸ್ಥಾನ ಪಡೆದಾಗ ಭೂಮಿಯ ನೆರಳು ಚಂದ್ರನ ಮೇಲ್ಮೈ ಮೇಲೆ ಬೀಳುತ್ತದೆ. ಆಗ ಚಂದ್ರ ಕೆಲ ಸಮಯ ಮರೆಯಾಗುತ್ತಾನೆ. ಚಂದ್ರನ ಮೇಲ್ಮೈ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಅಂದರೆ ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಗೋಲ್ಡನ್ ರಿಂಗ್‌ನಂತೆ ಚಂದ್ರ ಕಾಣಿಸುತ್ತದೆ.
ಯಾವ ರಾಶಿಗಳಿಗೆ ಯಾವ ಫಲ?
ಶುಭ ಫಲ: ಮಿಥುನ, ಕರ್ಕಾಟಕ, ವೃಶ್ಚಿಕ, ಕುಂಭ
ಮಿಶ್ರ ಫಲ: ಸಿಂಹ, ತುಲಾ, ಧನು, ಮೀನ
ಅಶುಭ ಫಲ: ಮೇಷ, ವೃಷಭ, ಕನ್ಯಾ, ಮಕರ
ಧರ್ಮ ಶಾಸ್ತ್ರದ ಪ್ರಕಾರ, ಶನಿವಾರ ಮಧ್ಯಾಹ್ನ 3.20 ಗ್ರಹಣಕ್ಕೆ ಸಿದ್ಧತೆಗಳನ್ನು ಪ್ರಾರಂಭಿಸಬೇಕು. ಇದಕ್ಕಿಂತ ಮೊದಲು ಸ್ನಾನ, ಭೋಜನ ಸೇರಿದಂತೆ ಇತ್ಯಾದಿಗಳನ್ನು ಮಾಡಿಕೊಳ್ಳಬೇಕು. ಚಿಕ್ಕ ಮಕ್ಕಳು, ವೃದ್ಧರು ಹಾಗೂ ರೋಗಗ್ರಸ್ತರು ರಾತ್ರಿ 7.30ರ ಮುಂಚಿತವಾಗಿ ಲಘು ಆಹಾರವನ್ನು ಸ್ವೀಕರಿಸಬಹುದು. ಅಶುಭ ಫಲ ಇದ್ದವರು, ಗರ್ಭಿಣಿಯರು ಗ್ರಹಣವನ್ನು ನೋಡಬಾರದು ಎಂದು ಹೇಳಲಾಗಿದೆ.