ಸಮಗ್ರ ನ್ಯೂಸ್: ಮಂಗಳೂರು ದಸರಾದ ಶೋಭಾ ಯಾತ್ರೆಯಲ್ಲಿ ಸೌಜನ್ಯಳ ಫೋಟೊ ಇದ್ದ ಕಾರಣಕ್ಕೆ ನಿಷೇಧಿಸಲ್ಪಟ್ಟ ಟ್ಯಾಬ್ಲೋ ಮಂಗಳೂರಿನ ವಾಮಾಂಜೂರು ಶಾರದೋತ್ಸವದಲ್ಲಿ ಪಾಲ್ಗೊಂಡು ಜನ ಮನ್ನಣೆ ಪಡೆಯಿತು.
ಮಂಗಳೂರಿನ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಬೇಕಿದ್ದ ಈ ಟ್ಯಾಬ್ಲೋ ಕುದ್ರೊಳಿ ದೇವಳದ ಆಡಳಿತ ಮಂಡಳಿಯ ವಿರೋಧದಿಂದ ಕೊನೆ ಕ್ಷಣದಲ್ಲಿ ಪೊಲೀಸ್ ಅಧಿಕಾರಿಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳದಂತೆ ತಡೆಹಿಡಿದ್ದರು, ಇದ್ದಕ್ಕೆ ವ್ಯಾಪಕ ಆಕ್ರೋಶ ಸಾರ್ವಜನಿಕ ವಲಯದಲ್ಲೂ ವ್ಯಕ್ತವಾಗಿತ್ತು.
ಮಾಹಿತಿ ತಿಳಿದ ವಾಮಾಂಜೂರು ಸಾರ್ವಜನಿಕ ಶಾರದಾ ಮಹೋತ್ಸವ ಪೂಜಾ ಸಮಿತಿ ಸೌಜನ್ಯಪರ ಹೋರಾಟಗಾರನ್ನು ಸಂಪರ್ಕಿಸಿ ವಾಮಾಂಜೂರು ಸಾರ್ವಜನಿಕ ಶಾರದೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿತ್ತು.
ಅದರಂತೆ ಬುಧವಾರ ಸಂಜೆ ವಾಮಾಂಜೂರಿನಲ್ಲಿ ಆಯೋಜಿಸಿದ್ದ ಶಾರದ ಮಾತೆಯ ಭವ್ಯ ಶೋಭಾಯಾತ್ರೆಯಲ್ಲಿ ಸೌಜನ್ಯಳ ಭಾವಚಿತ್ರವಿರುವ ಟ್ಯಾಬ್ಲೋ ಪಾಲ್ಗೊಂಡು ಅದರಲ್ಲಿ ಶ್ರೀ ದೇವಿಯ ರೂಪಕ ಸಾವಿರಾರು ಜನರಿಂದ ವೀಕ್ಷಿಸಲ್ಪಟ್ಟು ಅಪಾರ ಜನ ಮನ್ನಣೆ ಪಡೆಯಿತು,
ಈ ಬಗ್ಗೆ ಪ್ರತಿಕ್ರಿಯಿಸಿರುವ ಹೋರಾಟಗಾರ್ತಿ ಪ್ರಸನ್ನ ರವಿ ಸತ್ಯದ ಪರ ನಿಂತ ವಾಮಾಂಜೂರು ಸಾರ್ವಜನಿಕ ಶಾರದೋತ್ಸವ ಪೂಜಾ ಸಮಿತಿಗೆ ಧನ್ಯವಾದ ಹೇಳಿದ್ದಾರೆ ಮತ್ತು ಈ ಮೂಲಕ ಸೌಜನ್ಯಳ ಶಕ್ತಿ ಏನೆಂಬುದು ಸಾಬೀತಾಗಿದೆ ಎಂದಿದ್ದಾರೆ.