ಸಮಗ್ರ ನ್ಯೂಸ್: ಜಗತ್ ಪ್ರಸಿದ್ಧ ಮೈಸೂರು ದಸರಾದ ಜಂಬೂ ಸವಾರಿ ಅಕ್ಟೋಬರ್ 24ರಂದು ನಡೆಯಲಿದ್ದು, ಆ ಮೂಲಕ ಅದ್ಧೂರಿಯ ದಸರಾ ಆಚರಣೆಗೆ ತೆರೆ ಬೀಳಲಿದೆ. ವಿಜಯದಶಮಿಯ ದಿನದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಜಂಬೂಸವಾರಿ ಮತ್ತು ಪಂಜಿನ ಕವಾಯತು ನಡೆಯಲಿದೆ.
ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂ ಸವಾರಿ ಸಾಗಲಿದ್ದು, ಗಜಪಡೆಗಳು ಸಾಗುವ ಈ ರಸ್ತೆಯನ್ನು ಅಲಂಕಾರ ಮಾಡಲಾಗಿದೆ. ಜನರಿಗೆ ರಸ್ತೆಯ ಎರಡೂ ಬದಿಗಳಲ್ಲಿ ನಿಂತು ಜಂಬೂ ಸವಾರಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಜಂಬೂ ಸವಾರಿಯ ಮೇಲೆ ಯಾವುದೇ ವಸ್ತುಗಳನ್ನು ಎಸೆಯದಂತೆ ಜಾಲರಿಗಳನ್ನು ಅಳವಡಿಸಲಾಗಿದೆ.
ಜಂಬೂ ಸವಾರಿ ವೇಳೆ 31 ಜಿಲ್ಲೆಗಳ ಕಲೆ, ಸಂಸ್ಕøತಿಗಳನ್ನು ಬಿಂಬಿಸುವ ಸ್ಥಬ್ದಚಿತ್ರಗಳು ಜನರ ಗಮನ ಸೆಳೆಯಲಿವೆ ಇದರ ಜೊತೆಗೆ ಜಾನಪದ ಕಲಾ ತಂಡಗಳು ಜಂಬೂ ಸವಾರಿಗೆ ಮೆರುಗು ತರಲಿವೆ.