ಸತ್ತ ನಂತರ ನಾವು ಎಲ್ಲಿಗೆ ಹೋಗುತ್ತೇವೆ..? ಸ್ವರ್ಗ ನರಕ ಎಂಬುದು ಇದೆಯಾ..? ದೇಹ ಬಿಟ್ಟ ಮೇಲೂ ಆತ್ಮ ಕ್ಕೆ ಸುತ್ತ – ಮುತ್ತ ನಡೆಯುವ ಘಟನೆಗಳು ಗೋಚರಿಸುತ್ತವೆಯೇ..? ದೇಹವನ್ನು ಆಗಲಿದೆ ಮೇಲೆ ಆತ್ಮ ನಾವಿದ್ದಲ್ಲೇ ಇರುತ್ತದೆಯ…? ಎರಡನೇ ಜನ್ಮ ಇದೆಯೇ….? ಮರಣದ ನಂತರದ ಪ್ರಯಾಣವನ್ನು ಕರ್ಮದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆಯೇ…? ಇಂತಹ ಎಲ್ಲಾ ಪ್ರಶ್ನೆಗಳು ನಮ್ಮನಿಮ್ಮೆಲ್ಲರ ಮನಸ್ಸಿನಲ್ಲಿ ಆಗಾಗ ಉದ್ಭವಿಸುತ್ತಿರುತ್ತವೆ.
ಆದರೆ ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದಂತಾಗಿದೆ. ಇಲ್ಲೊಬ್ಬ ವ್ಯಕ್ತಿ ಸತ್ತು ಸ್ವಲ್ಪ ಸಮಯದಲ್ಲಿ ಮತ್ತೆ ಬದುಕಿದ್ದಾನೆ. ಇದು ಸಾಧ್ಯವೇ…?, ನಿಜವೇ…? ಅನ್ನಿಸಬಹುದು. ಸ್ವಲ್ಪ ವಿಚಿತ್ರ ಕಾಣಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಸಾವಿನ ನಂತರದ ಅನುಭವವನ್ನು ಹೇಳಿಕೊಂಡಿದ್ದಾನೆ.
ಈತನ ಹೆಸರು ಸ್ಕಾಟ್ ಡ್ರೂಮೊಂಡ್. ಅವನಿಗೀಗ 60 ವರ್ಷ ವಯಸ್ಸು. ತನ್ನ 28ನೇ ವಯಸ್ಸಿನಲ್ಲಿ ಆತನಿಗೊಮ್ಮೆ ಸಾವು ಸಂಭವಿಸಿತ್ತಂತೆ. ಅದೂ ಕೂಡ ಕೇವಲ 20 ನಿಮಿಷಗಳವರೆಗೆ ಮಾತ್ರವಂತೆ. 20 ನಿಮಿಷಗಳ ಬಳಿಕ ಪ್ರಾಣ ಮರಳಿ ದೇಹ ಸೇರಿತ್ತಂತೆ.
ಸ್ಕಾಟ್ ಡ್ರಮ್ಮಂಡ್ ಹೇಳುವ ಪ್ರಕಾರ ಅವರು 28 ವರ್ಷ ವಯಸ್ಸಿನವರಾಗಿದ್ದಾಗ, ಸ್ಕೈಯಿಂಗ್ ಮಾಡುವಾಗ ಅಪಘಾತ ಸಂಭವಿಸಿತಂತೆ. ಈ ಅಪಘಾತದಲ್ಲಿ ಅವರ ಕೈಯ ಹೆಬ್ಬೆರಳು ಮುರಿದಿವೆ. ಆಪರೇಷನ್ ಸಮಯದಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಆ ವೇಳೆ ನರ್ಸ್ ಓಡಿ ಹೋಗಿ ವೈದ್ಯರನ್ನು ಕರೆತರುವುದನ್ನು ಆಲಿಸಿದ್ದಾರೆ ಮತ್ತು ಘಟನೆಯ 20 ನಿಮಿಷಗಳ ಬಳಿಕ ಆತನಿಗೆ ಜೀವ ಬಂದಿದೆ. ಇನ್ನೂ ನಿಮ್ಮ ಸಮಯ ಮುಗಿದಿಲ್ಲ ಎಂದು ದೇವರು ಅವರಿಗೆ ಹೇಳಿ ವಾಪಸ್ ಕಳುಹಿಸಿದ್ದಾನಂತೆ.
ಆ 20 ನಿಮಿಷಗಳಲ್ಲಿ ಏನಾಯಿತು…!?
ಈ ಕುರಿತು ಮಾತನಾಡಿರುವ ಸ್ಕಾಟ್, “ನನ್ನ ಸಾವಿನ ಕುರಿತು ನರ್ಸ್ ಕಿರುಚುತ್ತಿರುವುದನ್ನು ಕೇಳಿದೆ, ಅದಾದ ಬಳಿಕ ನನ್ನ ಹತ್ತಿರದಲ್ಲಿ ಒಂದು ಅದೃಶ್ಯ ಶಕ್ತಿ ಇರುವುದನ್ನು ನಾನು ಅನುಭವಿಸಿದೆ. ಆ ಅದೃಶ್ಯ ಶಕ್ತಿ ಕ್ಷಣಾರ್ಧದಲ್ಲಿ ನನ್ನನ್ನು ಒಂದು ಸುಂದರ ಮೈದಾನಕ್ಕೆ ತೆಗೆದುಕೊಂಡು ಹೋಯಿತು. ಬಳಿಕ ನಾನು ಆ ಅದೃಶ್ಯ ಶಕ್ತಿಯನ್ನು ಹಿಂಬಾಲಿಸಿದೆ. ಆ ಸುಂದರ ಮೈದಾನದಲ್ಲಿ ಬಣ್ಣಬಣ್ಣದ ಹೂವುಗಳಿದ್ದವು. ಸೊಂಟೆತ್ತರಕ್ಕೆ ಬೆಳೆದ ಹುಲ್ಲಿತ್ತು. ಬಿಳಿ ಬಣ್ಣದ ಆಗಸ ನನ್ನನ್ನು ಸ್ಪರ್ಶಿಸುತ್ತಿತ್ತು. ಆದರೆ, ಆ ಅದೃಶ್ಯ ಶಕ್ತಿ ನನಗೆ ಹಿಂತಿರುಗಿ ನೋಡದಿರಲು ಹೇಳಿತ್ತು. ತಮ್ಮ ಬಲಭಾಗದಲ್ಲಿ ನೀಳವಾಗಿ ಬೆಳೆದ ಸುಂದರ ಮರಗಳಿದ್ದವು. ಆ ಮರಗಳನ್ನು ನಾನು ಹಿಂದೆಂದು ನೋಡಿರಲಿಲ್ಲ. ಇನ್ನೊಂದೆಡೆ ಸುಂದರವಾದ ಹೂವುಗಳಿದ್ದವು. ಇಂದಿಗೂ ಕೂಡ ನನಗೆ ಆ ಹೂವುಗಳು ನೆನಪಿವೆ ಮತ್ತು ಆ ಎರಡನೇ ಪ್ರಪಂಚ ತುಂಬಾ ಶಾಂತವಾಗಿತ್ತು. ಅದೃಶ್ಯ ಶಕ್ತಿಯ ಹೇಳಿಕೆಯ ಮೇರೆಗೆ ನಾನು ಮೋಡಗಳತ್ತ ಪ್ರಯಾಣ ಬೆಳೆಸಿದ್ದೆ. ಆದರೆ, ಏತನ್ಮಧ್ಯೆ ಯಾರೋ ನನ್ನ ಕೈ ಹಿಡಿದು ಇನ್ನೂ ನಿನ್ನ ಸಮಯ ಬಂದಿಲ್ಲ ಎಂದು ಹೇಳಿದರು. ನೀನು ಮಾಡಬೇಕಾಗಿರುವುದು ಸಾಕಷ್ಟಿದೆ. ಈ ಧ್ವನಿ ಕೇಳಿದ ಬಳಿಕ ಪುನಃ ನಾನು ನನ್ನ ಶರೀರಕ್ಕೆ ಮರಳಿದೆ” ಎಂದಿದ್ದಾರೆ.
ಅವರು ಸತ್ತು ಬದುಕಿದ್ದು ನಿಜವಂತೆ. ಆದರೆ ಆ ನಡುವಿನ ಸಮಯದ ಬಗ್ಗೆ ಅವರು ಹೇಳಿದ ಕಥೆಯನ್ನು ಕೆಲವರು ನಂಬಿದ್ದಾರೆ, ಇನ್ನೂ ಕೆಲವರು ಇದು ಕಟ್ಟುಕತೆ ಎಂದು ಸುಮ್ಮನಾಗಿದ್ದಾರೆ.