ಸಮಗ್ರ ನ್ಯೂಸ್: ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡ ಪೋಲೀಸರ ತ್ಯಾಗವನ್ನು ಸ್ಮರಿಸಲು ದೇಶದಲ್ಲಿ ಪ್ರತಿ ವರ್ಷ ಅಕ್ಟೋಬರ್ 21ರಂದು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಇಂದು ದೇಶಾದ್ಯಂತ ಹುತಾತ್ಮ ಪೋಲೀಸರಿಗೆ ಗೌರವ ಸಲ್ಲಿಕೆಯಾಗಲಿದೆ. 1959ರಲ್ಲಿ ಲಡಾಖ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೇಂದ್ರ ಸಶಸ್ತ್ರ ಮೀಸಲು ಪಡೆಯ ಹತ್ತು ಮಂದಿ ಪೋಲೀಸರು ಚೀನಾದೊಂದಿಗೆ ನಡೆದ ಭೀಕರ ಯುದ್ದದಲ್ಲಿ ಪ್ರಾಣ ಕಳೆದುಕೊಂಡ ದಿನವನ್ನು ಪೋಲೀಸ್ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ. ಇದನ್ನು ಪೋಲೀಸ್ ಧ್ವಜ ದಿನ ಅಂತಲೂ ಕರೆಯಲಾಗುತ್ತದೆ.
ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹುತಾತ್ಮ ಪೋಲೀಸರಿಗೆ ಗೌರವ ಸಲ್ಲಿಸಿದರು. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಬೆಂಗಳೂರಿನಲ್ಲಿ ಪೋಲೀಸ್ ಹುತಾತ್ಮರ ದಿನದಲ್ಲಿ ಭಾಗಿಯಾಗಿ ಹುತಾತ್ಮರಿಗೆ ಗೌರವ ಸಲ್ಲಿಸಿದರು