ಸಮಗ್ರ ನ್ಯೂಸ್: ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ, ದೇಶದ ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸಲು 13 ಮಂದಿ ವಕೀಲರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ ಅವರೂ ಸದಸ್ಯರಾಗಿರುವ ಕೊಲಿಜಿಯಂ ಸಮಿತಿಯು,
ಗುವಾಹಟಿ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನಾಗಿ ವಕೀಲರಾದ ಎನ್. ಉನ್ನೀಕೃಷ್ಣನ್ ಹಾಗೂ ಕೌಶಿಕ್ ಗೋಸ್ವಾಮಿ ಅವರನ್ನು ನೇಮಿಸಿ ಎಂದು ಶಿಫಾರಸು ಮಾಡಿದೆ.
ಉತ್ತರಾಖಂಡ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ವಕೀಲರಾದ ಸಿದ್ದಾರ್ಥ್ ಶಾ ಹಾಗೂ ಅಲೋಕ್ ಮಹ್ರಾ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನಾಗಿ ವಕೀಲರಾದ ಹಜ್ರತ್ ಸಿಂಗ್ ಗ್ರೆವಾಲ್, ದೀಪಿಂದರ್ ಸಿಂಗ್ ನಲ್ವ, ಸುಮಿತ್ ಗೋಯಲ್, ಸುದೀಪ್ತಿ ಶರ್ಮಾ ಹಾಗೂ ಕೀರ್ತಿ ಸಿಂಗ್ ಅವರನ್ನು ನೇಮಕ ಮಾಡಬೇಕು ಎಂದು ಕೊಲಿಜಿಯಂ ಶಿಫಾರಸಿನಲ್ಲಿ ಹೇಳಿದೆ.
ವಿನಯ್ ಸರಫ್, ವಿವೇಕ್ ಜೈನ್, ಆಶಿಶ್ ಶೋಟಿ ಹಾಗೂ ಅಮಿತ್ ಸೇಲ್ ಅವರನ್ನು ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಬೇಕು ಎಂದೂ ಕೊಲಿಜಿಯಂ ಶಿಫಾರಸು ಮಾಡಿದೆ.