ಸಮಗ್ರ ನ್ಯೂಸ್: ಜೀವನದಿ ಕಾವೇರಿಯ ಉಗಮಸ್ಥಾನ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಮಧ್ಯರಾತ್ರಿ 1.27ರ ಕರ್ಕಾಟಕ ಲಗ್ನದಲ್ಲಿ ತೀರ್ಥೋದ್ಭವ ನಡೆದಿದೆ.
ಕಾವೇರಿ ತೀರ್ಥೋದ್ಭವದ ವೇಳೆ ಹಬ್ಬದ ವಾತಾವರಣ ಮನೆಮಾಡಿತ್ತು. ವರ್ಷಕ್ಕೊಮ್ಮೆ ತೀರ್ಥ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡುವ ಕಾವೇರಿಯನ್ನು ಕಣ್ತುಂಬಿಕೊಳ್ಳಲು ಸಹಸ್ರ ಸಂಖ್ಯೆಯ ಭಕ್ತರ ದಂಡು ನೆರೆದಿತ್ತು.
ಇಂದು ರಾತ್ರಿ 1 ಗಂಟೆ 27 ನಿಮಿಷಕ್ಕೆ ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯ ಕಾಲದಲ್ಲಿ ಕಾವೇರಿ ತೀರ್ಥೋದ್ಭವವಾಗಿದೆ. ಈ ಪವಿತ್ರ ಕ್ಷಣವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡಿದ್ದು, ಅರ್ಚಕರು ಭಕ್ತರ ಮೇಲೆ ಕಾವೇರಿ ನೀರನ್ನು ಎರಚಿದ್ದು, ಕಾವೇರಿ ಮಾತೆಯ ಪ್ರೋಕ್ಷಣೆಯಿಂದ ಭಕ್ತರು ಪುನೀತರಾಗಿದ್ದಾರೆ.