ಸಮಗ್ರ ನ್ಯೂಸ್: ಇತ್ತೀಚೆಗೆ ಹಾವಿನ ಸಂತತಿಯು ಕಡಿಮೆಯಾಗಿದೆ. ಇಂತಹ ಸಮಯದಲ್ಲಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರವಾದ ಹಾವನ್ನು ಸೆರೆ ಹಿಡಿಯಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಅಪರೂಪದ ಬ್ಯಾಂಬೋ ಪಿಟ್ ವೈಫರ್ ಹಾವು ಸೆರೆ ಸೆರೆಸಿಕ್ಕಿದೆ ಇದು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಇರುವ ಅಳಿವಿನಂಚಿನ ಉರಗವಾಗಿದ್ದು ಕಳಸೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಚಂದ್ರು ಭಟ್ ಅವರ ಮನೆಯ ಅಂಗಳದಲ್ಲಿ ಈ ಹಾವು ಸಿಕ್ಕಿದೆ.
ಈ ಹಾವಿನ ವಿಶೇಷವೆನೆಂದರೆ ತಲೆ ಮೇಲೆ ಬಿದ್ದ ನೀರನ್ನ ಹಾಗೇ ಹೀರಿಕೊಳ್ಳುವ ಅಪರೂಪದ ಉರಗವಾಗಿದು, ಹೆಚ್ಚಾಗಿ ಇದು ಬಿದಿರಿನ ಬಂಬಿನಲ್ಲಿ ವಾಸವಿರುತ್ತದೆ.
ಈ ಹಾವು ಕಡಿದರೆ ಸಾಯುವುದಿಲ್ಲ, ಮತ್ತಿನಲ್ಲಿದ್ದು, ಜ್ಞಾನ ತಪ್ಪುತ್ತಾರೆ.
ಈ ಅಪರೂಪದ ಹಾವಿನ ಸೌಂದರ್ಯವನ್ನು ನೋಡಿ ಸ್ಥಳೀಯರು ಖುಷಿಪಟ್ಟರು. ಹಾಗೇ ಈ ಹಾವನ್ನ ರಿಜ್ವಾನ್ ಅವರು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.